ನಾರಾವಿ : ಕುತ್ತೂರು ಗ್ರಾಮದ ಸಮೃದ್ಧಿ ಮನೆ ನಿವಾಸಿ ಟಿ. ಎಸ್. ಸಲೀಂ ಎಂಬವರ ಬೈಕ್ ನ್ನು ಅವರ ಮನೆಯಿಂದ ಕದ್ದೊಯ್ದ ಘಟನೆ ನಡೆದಿದೆ.
ಘಡನಾನುಸಾರವಾಗಿ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾ.4ರ ಬೆಳಗಿನ ಜಾವ 3ರಿಂದ 3.30ಗಂಟೆ ಮಧ್ಯೆ ಬೈಕ್ ಕಳ್ಳತನವಾಗಿದ್ದು, ಇಬ್ಬರು ವ್ಯಕ್ತಿಗಳು ಕಳ್ಳತನ ಮಾಡುವ ದೃಶ್ಯ ಮನೆಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕಳವಾದ ಬೈಕ್ ನ ಮೊತ್ತ ಸುಮಾರು ರು. 60ಸಾವಿರ ಎಂದು ದೂರಿನಲ್ಲಿ ತಿಳಿಸಲಾಗಿದೆ.