ಪುತ್ತೂರು: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕೆಲಸಗಳ ಬಗ್ಗೆ ನಡೆದ ತಾಂಬೂಲ ಪ್ರಶ್ನಾ ಚಿಂತನೆಯ ಪರಿಹಾರ ಕಾರ್ಯಕ್ರಮ ಮಾ. 8 ರಿಂದ 14 ರ ವರೆಗೆ ನಡೆಯಲಿದೆ.
ಮಾ. 8 ರಂದು ಸಂಜೆ 6 ರಿಂದ ಅಘೋರ ಹೋಮ, ಬಾದೋಚ್ಚಾಟನೆ, ವನದುರ್ಗಾಹೋಮ ನಡೆಯಲಿದೆ.
ಮಾ. 9ರ ಆದಿತ್ಯವಾರ ಬೆಳಗ್ಗೆ 8 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ಮೃತ್ಯುಂಜಯ ಹೋಮ, ಸಂಜೆ ಗಂಟೆ 4ರಿಂದ ದುರ್ಗಾಪೂಜೆ, ರಾತ್ರಿ 8ಕ್ಕೆ ದೈವ ತಂಬಿಲ ಜರಗಲಿದೆ.
ಮಾ. 10ರ ಸೋಮವಾರ ಬೆಳಗ್ಗೆ 7.30ರಿಂದ ಪವಮಾನ ಹೋಮ, ಭೂ ವರಾಹ ಶಾಂತಿ, ತಿಲಹೋಮ, ಮಾ. 11ರ ಮಂಗಳವಾರ ಸರ್ಪಸಂಸ್ಕಾರ, ಮಾ. 14ರ ಶುಕ್ರವಾರ ಬೆಳಗ್ಗೆ ಪಂಚಗವ್ಯ, ಪುಣ್ಯಾರ್ಚನೆ, ಆಶ್ಲೇಷ ಬಲಿ, ಬ್ರಹ್ಮಚಾರಿ ಆರಾಧನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.