ವಿಟ್ಲ : ಮಾಡತಡ್ಕದ ಕಲ್ಲಿನ ಕೋರೆಯಲ್ಲಿ ಸಂಭವಿಸಿದ ಸ್ಫೋಟದ ಘಟನಾ ಸ್ಥಳಕ್ಕೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಸುತ್ತಮುತ್ತಲಿನ ಹಾನಿಗೊಳಗಾದ ಮನೆಗಳನ್ನೂ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಲ್ಲಿ ಮಾಹಿತಿಯನ್ನು ಪಡೆದು ಘಟನೆಯಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ತಕ್ಷಣ ಸಂಬಂಧಪಟ್ಟ ಕೋರೆಯ ಮಾಲಕರು ನೀಡಬೇಕು ಮತ್ತು ಅಧಿಕಾರಿಗಳು ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ತಕ್ಷಣ ಎಚ್ಚೆತ್ತು ಗ್ರಾಮದ ಜನರನ್ನೂ ರಕ್ಷಣೆ ಮಾಡಬೇಕು. ಗ್ರಾಮಸ್ಥರು ಈಗಾಗಲೆ ಸದಾ ಭಯದಿಂದ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಪರಿಸ್ಥಿತಿ ಬಂದಿದೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಗ್ರಾಮದ ನಾಗರಿಕರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು ಮತ್ತು ತೊಂದರೆಗೆ ಒಳಗಾದ ಕುಟುಂಬಗಳಿಗೆ ದೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಪುತ್ತೂರು ಭಾರತೀಯ ಜನತಾ ಪಾರ್ಟಿಯ ಗ್ರಾಮಾಂತರ ಮಂಡಲ ಪ್ರದಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಒಬಿಸಿ ಮೋರ್ಚಾ ದ ಪ್ರದಾನ ಕಾರ್ಯದರ್ಶಿ ಹರೀಶ್ ಮರುವಳ, ಟೌನ್ ಬ್ಯಾಂಕ್ ನಿರ್ದೇಶಕ ರಾಜು ಶೆಟ್ಟಿ , ಟ್ರಸ್ಟಿನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ, ರವಿಶಂಕರ್ ವಿಟ್ಲ. ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.