ಕೊಳ್ತಿಗೆ : ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಈ ನಿಟ್ಟಿನಲ್ಲಿ ಪುತ್ತೂರು ಬಿಜೆಪಿ ವತಿಯಿಂದ ಸಹಕಾರಿ ಭಾರತೀಯ ಎಲ್ಲಾ ನೂತನ ನಿರ್ದೇಶಕರುಗಳಿಗೆ ಭಾರತೀಯ ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ, ಕೊಳ್ತಿಗೆ ಸಹಕಾರಿ ಸಂಘದಲ್ಲಿ ಈ ಹಿಂದೆ ಕಾಂಗ್ರೆಸ್ ಬೆಂಬಲಿತರು ಆಡಳಿತ ನಡೆಸುತ್ತಿದ್ದರು. ಆದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನ ದುರಾಡಳಿತ, ರೈತ ವಿರೋಧಿ ನಿಲುವುಗಳು, ಕೇವಲ ಒಂದು ವರ್ಗದ ಜನರ ತುಷ್ಟೀಕರಣದ ರಾಜನೀತಿ ಇವೆಲ್ಲವನ್ನೂ ಕೊಳ್ತಿಗೆಯ ಸಹಕಾರಿ ಬಂಧುಗಳು ಸೂಕ್ಷ್ಮವಾಗಿ ಗಮನಿಸಿ ತಮ್ಮ ಭವಿಷ್ಯದ ಬಗ್ಗೆ ಕಲ್ಪನೆಯನ್ನು ಇಟ್ಟುಕೊಂಡು ಸಹಕಾರಿ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಬೆಂಬಲಿತ ಸಹಕಾರ ಭಾರತೀಯ ಅಭ್ಯರ್ಥಿಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವ ಭರವಸೆಯಿಂದ ನಮ್ಮನ್ನು ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಹಕಾರಿ ಬಂಧುಗಳು ನಮ್ಮಲ್ಲಿ ಇರಿಸಿದ ನಂಬಿಕೆ , ವಿಶ್ವಾಸಕ್ಕೆ ಕಿಂಚಿತ್ತೂ ಚ್ಯುತಿ ಬಾರದ ರೀತಿಯಲ್ಲಿ ನಾವೆಲ್ಲರೂ ಕಾರ್ಯ ಪ್ರವೃತರಾಗಬೇಕೆಂದು ಹೇಳಿ ನೂತನ ನಿರ್ದೇಶಕರುಗಳಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಸಹಕಾರಿ ಪ್ರಕೋಷ್ಠ ಅಧ್ಯಕ್ಷ ಕೃಷ್ಣ ಕುಮಾರ್ ರೈ ಗುತ್ತು , ಗ್ರಾಮಾಂತರ ಮಂಡಲ ಉಪಾಧ್ಯಕ್ಷರಾದ ಯತೀಂದ್ರ ಕೊಚ್ಚಿ, ವಿಧ್ಯಾದರ ಜೈನ್ , ಕಾರ್ಯದರ್ಶಿ ನಾಗವೇಣಿ, ಜಿಲ್ಲಾ ಯುವಮೋರ್ಛ ಕಾರ್ಯದರ್ಶಿ ವಿರೂಪಾಕ್ಷ ಭಟ್, ಮನ್ ಕೀ ಬಾತ್ ಮಂಡಲ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ, ಭಾಸ್ಕರ ರೈ ಕಂಟ್ರಮಜಲು, ಕೊಳ್ತಿಗೆ ಶಕ್ತಿಕೇಂದ್ರ ಅಧ್ಯಕ್ಷ ಸತ್ಯಪ್ರಕಾಶ್, ಬೂತ್ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಹಿರಿಯರಾದ ಸುರೇಶ್ ಆಳ್ವ, ವಿಶ್ವನಾಥ ಕುಲಾಲ್ , ಮಾಧ್ಯಮ ಪ್ರಕೋಷ್ಠ ಸಂಚಾಲಕ ಮಹೇಶ್ ರೈ ಕೇರಿ, ನೂತನ ನಿರ್ದೇಶಕರುಗಳು ಉಪಸ್ಥಿತರಿದ್ದರು