ಪುತ್ತೂರು: ಖಾಲಿಯಾಗಿದ್ದ ಪುತ್ತೂರು ನಗರ ಅಭಿವೃದ್ದಿ ಪ್ರಾಧಿಕಾರದ ನೂತನ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಅಧಿಕಾರ ಸ್ವೀಕರಿಸಿದ್ದಾರೆ.
ಮಂಗಳೂರು ನಗರಪಾಲಿಕಾ ಕಚೇರಿಯಲ್ಲಿ ಎ.ಡಿ. ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರನ್ನು ಪುಡಾಗೆ ನಿಯುಕ್ತಿಗೊಳಿಸಲಾಗಿದೆ. ವಾರದ ಪ್ರತೀ ಬುಧವಾರ ಇವರು ಕಚೇರಿಯಲ್ಲಿ ಲಭ್ಯರಿರುತ್ತಾರೆ.
ಕಡತ ವಿಲೇವಾರಿಗೆ ಸೂಚನೆ:
ನೂತನ ಕಾರ್ಯದರ್ಶಿಯವರನ್ನು ಪುಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ ಹಾಗೂ ನಿಹಾಲ್ ಪಿ ಶೆಟ್ಟಿ ಕಲ್ಲಾರೆಯವರು ಸ್ವಾಗತಿಸಿದರು. ಬಳಿಕ ಅಧಿಕಾರಿ ಜೊತೆ ಕಡತ ವಿಲೇವಾರಿ ಕುರಿತು ಮಾತುಕತೆ ನಡೆಸಿದರು. ಕಳೆದ ಒಂದೂವರೆ ತಿಂಗಳಿಂದ ಕಾರ್ಯದರ್ಶಿಯವರಿಲ್ಲದ ಕಾರಣ ಒಟ್ಟು 500 ಕ್ಕೂಮಿಕ್ಕಿ 9/11 ಖಾತಾ ಕಡತಗಳು ಬಾಕಿ ಉಳಿದಿದ್ದು ಅದನ್ನು ಶೀಘ್ರವೇ ವಿಲೇವಾರಿ ಮಾಡುವಂತೆ ಸೂಚನೆಯನ್ನು ನೀಡಿದರು.