ಪುತ್ತೂರು: ಮುಳಿಯ ಎಂಬುದು ನಂಬಿಕೆಯ ಪ್ರತೀಕ. ಆಭರಣ ಕ್ಷೇತ್ರದಲ್ಲಿ ವಿಶೇಷ ತೋರಿರುವ ಜತೆಗೆ ಸಾಮಾಜಿಕ ಕಾರ್ಯಗಳಲ್ಲೂ ಮುಳಿಯ ಸಂಸ್ಥೆ ತೊಡಗಿರುವುದು ಶ್ಲಾಘನೀಯ ಎಂದು ಸಾಯ ಎಂಟರ್ಪೈಸಸ್ ಮಾಲಕಿ ಸಂಧ್ಯಾ ಸಾಯ ಹೇಳಿದರು.
ಅವರು ಮಾ.3ರಿಂದ ಜುವೆಲ್ಲರ್ಸ್ ನಲ್ಲಿ ಆರಂಭೂಂಡಿರುವ ಡೈಮೆಂಡ್ ಫೆಸ್ಟ್ ಅನ್ನು ಉದ್ಘಾಟಿಸಿ ಮಾತನಾಡಿದರು.
ಡೈಮಂಡ್ ರೆಸ್ಟ್ ಗ್ರಾಹಕರಿಗೆ ಹತ್ತಾರು ಅವಕಾಶಗಳನ್ನು ತೆರೆದಿಟ್ಟಿದೆ. ಇಲ್ಲಿ ವಜ್ರಗಳ ಖರೀದಿಗೂ ಸಾಕಷ್ಟು ಆಯ್ಕೆಗಳಿವೆ ಎಂದರು.
ಗಾಯಕಿ ಚೈತ್ರಿಕಾ ಕೋಡಿಬೈಲು ಮಾತನಾಡಿ, ವಜ್ರ ಹೊಳಪು ಹಾಗೂ ಬಲಕ್ಕೆ ಹೆಸರುವಾಸಿ. ಇದು ಬದುಕಿಗೂ 1. ಹೊಳಪು ತುಂಬುವಂಥದ್ದು ಈ ಫನ್ ಎಂದರು.

ಶ್ರೀ ಮಹಾಲಕ್ಷ್ಮೀ ಪ್ಲೈ ವುಡ್ ಸಂಸ್ಥೆಯ ಮಾಲಕಿ ರಿತ್ವಿಕ್ ಭರತ್ ಮಾತನಾಡಿ, ಗ್ರಾಹಕರ ನಂಬಿಕೆ, ವಿಶ್ವಾಸಕ್ಕೆ ಪಾತ್ರವಾಗಿರುವ ಮುಳಿಯ ಸಂಸ್ಥೆಯ ಆಭರಣ ಕ್ಷೇತ್ರದಲ್ಲಿ ಗ್ರಾಹಕ ಸ್ನೇಹಿ ಸಂಸ್ಥೆ ಎಂದರು.
ಸಂಸ್ಥೆಯ ಆಡಳಿತ ನಿರ್ದೇಶಕಿ ಅಶ್ವಿನಿ ಕೃಷ್ಣ ಮುಳಿಯ ಮಾತನಾಡಿ, ಆಭರಣಕ್ಕೆ ಸಾಕಷ್ಟು ಬೇಡಿಕೆ ಇರುವ ಕಾಲಘಟ್ಟ ಇದು. ವಜ್ರ, ಚಿನ್ನ ವರ್ಷದಿಂದ ವರ್ಷಕ್ಕೆ ಮೌಲವರ್ಧನೆಗೊಳ್ಳುತ್ತಿದೆ. ವಜ್ರಗಳು ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಸಾವಿರ ರೂ.ನಿಂದ 18 ಲಕ್ಷ ರೂ. ಸಂಗ್ರಹ ಇದೆ ಎಂದರು.
ಆಡಳಿತ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಮಾತನಾಡಿ, ವಜ್ರವು ಜೀವನಕ್ಕೆ ಶಕ್ತಿ, ಆತ್ಮವಿಶ್ವಾಸ ಹಾಗೂ ಭದ್ರತೆಯನ್ನು ನೀಡುತ್ತದೆ. ನಿತ್ಯ ಬಳಕೆ, ಆಲಂಕಾರಿಕ ಬಳಕೆಯ ವಜ್ರಾಭರಣಗಳು ಇಲ್ಲಿವೆ. ಹಾಗಾಗಿ ಗ್ರಾಹಕರು ಆಭರಣದ ವಿಶೇಷತೆಯನ್ನು ಅರಿತು ಪಡೆಯಬೇಕು ಎಂದರು.
ಶಾಖಾ ಪ್ರಬಂಧಕ ರಾಘವೇಂದ್ರ ಪಾಟೀಲ್ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಪೂಜಿತಾ ಪ್ರಾರ್ಥಿಸಿದರು. ಪ್ರಭಾಕರ ಭಟ್ ವಂದಿಸಿದರು. ಸಹ ಪ್ರಬಂಧಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.