ವಾಯುಮಾಲಿನ್ಯ ನಿಯಂತ್ರಣಕ್ಕೆ ಸರಕಾರದ ದಿಟ್ಟ ಕ್ರಮ
ನವದೆಹಲಿ: ಪ್ರತಿವರ್ಷ ದಿಲ್ಲಿಯನ್ನು ಕಾಡುತ್ತಿರುವ ವಾಯುಮಾಲಿನ್ಯ ನಿಯಂತ್ರಿಸಲು ದಿಟ್ಟ ಕ್ರಮಕ್ಕೆ ಮುಂದಾಗಿರುವ ದಿಲ್ಲಿಯ ಬಿಜೆಪಿ ಸರಕಾರ 15 ವರ್ಷಕ್ಕಿಂತ ಹಳೆಯದಾಗಿರುವ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನೀಡದಿರಲು ನಿರ್ಧರಿಸಿದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನೀಡುವುದಿಲ್ಲ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದಾರೆ.
ಮಾರ್ಚ್ 31ರ ನಂತರ ಈ ನಿಯಮ ಜಾರಿಗೆ ಬರಲಿದೆ. ನಗರದಾದ್ಯಂತ ಪೆಟ್ರೋಲ್ ಬಂಕ್ಗಳಲ್ಲಿ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ನೀಡುವುದನ್ನು ಸರ್ಕಾರ ನಿಲ್ಲಿಸಲಿದೆ ಎಂದು ತಿಳಿಸಿದ್ದಾರೆ. ಪೆಟ್ರೋಲ್ ಬಂಕ್ಗಳಲ್ಲಿ ಹಳೆಯ ವಾಹನಗಳಿಗೆ ಇಂಧನ ತುಂಬಿಸುವಂತಿಲ್ಲ. ಹಳೆಯ ವಾಹನಗಳನ್ನು ಗುರುತಿಸಲು ವಿಶೇಷ ತಂಡ ರಚನೆ ಮಾಡಲಾಗುವುದು. ಮಾಲಿನ್ಯ ನಿಯಂತ್ರಣಕ್ಕೆ ಹೋಟೆಲ್ಗಳಲ್ಲಿ ಹೊಗೆ ನಿರೋಧಕ ಅಳವಡಿಕೆ ಕಡ್ಡಾಯ ಎಂದು ಹೇಳಿದ್ದಾರೆ.
2025ರ ಡಿಸೆಂಬರ್ ವೇಳೆಗೆ ದೆಹಲಿಯಲ್ಲಿ ಸುಮಾರು ಶೇ.90ರಷ್ಟು ಸಿಎನ್ಜಿ ಬಸ್ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಲಾಗುವುದು. ಸ್ವಚ್ಛ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆಯತ್ತ ಸರ್ಕಾರದ ಒತ್ತು ನೀಡುವ ಭಾಗವಾಗಿ ಎಲೆಕ್ಟ್ರಿಕ್ ಬಸ್ಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.