ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಪ್ರಾಚೀನ ಪರಂಪರೆಯ ಚಿನ್ನಾಭರಣ ಮಹೋತ್ಸವ ‘ಜಿ.ಎಲ್.ಆ್ಯಂಟಿಕ್ ಫೆಸ್ಟ್’ ಫೆ.24 ರಿಂದ ಆರಂಭಗೊಂಡಿದೆ.
ಪುರಾತನ ಆಭರಣಗಳು ಸಾಮಾನ್ಯ ಆಭರಣಗಳಂತೆ ಇದ್ದು ಪ್ರಾಚೀನ ಸಂಸ್ಕೃತಿಯನ್ನು ಬಿಂಬಿಸುತ್ತವೆ. ಆ್ಯಂಟಿಕ್ ಆಭರಣಗಳನ್ನು ವಜ್ರಗಳು, ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ಮುತ್ತುಗಳಂತಹ ಅಮೂಲ್ಯ ಲೋಹಗಳಿಂದ ತಯಾರಿಸಲಾಗುತ್ತದೆ. ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಆಂಟಿಕ್ ಆಭರಣಗಳ ವಿಭಾಗ ‘ಪ್ರಾಚಿ’ಯಲ್ಲಿ ಗ್ರಾಹಕರ ಕಣ್ಮನ ಸೆಳೆಯುವ ಅಮೋಘ ಆಭರಣಗಳ ಸಂಗ್ರಹವಿದ್ದು ಸಂಸ್ಥೆಯು ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ಆ್ಯಂಟಿಕ್ ಆಭರಣಗಳನ್ನು ಖರೀದಿಸಲು ಅವಕಾಶವಿದ್ದು, ಪ್ರತೀ ಖರೀದಿಯಲ್ಲಿ ಗ್ರಾಂಗೆ 200 ರೂ. ರಿಯಾಯಿತಿ, 40ಗ್ರಾಂ ಮೇಲ್ಪಟ್ಟ ಆ್ಯಂಟಿಕ್ ಆಭರಣದ ಖರೀದಿಗೆ ಪ್ರತಿ ಗ್ರಾಂಗೆ 250 ರೂ. ನೇರ ರಿಯಾಯಿತಿ, 80ಗ್ರಾಂ ಮೇಲ್ಪಟ್ಟ, ಆ್ಯಂಟಿಕ್ ಆಭರಣದ ಖರೀದಿಗೆ ಅಚ್ಚರಿಯ ಕೊಡುಗೆಗಳನ್ನು ನೀಡಲಾಗುತ್ತದೆ.
ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದೆ. ಅಲ್ಲದೆ ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.