ಬೆಳ್ಳಾರೆ: ಪಿಕಪ್ ಹಾಗೂ ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿದ ಘಟನೆ ಸವಣೂರು ರಸ್ತೆಯ ಕುಂಡಡ್ಕ ಚಾಮುಂಡಿಮೂಲೆ ಬಳಿ ಇಂದು ಬೆಳಗ್ಗೆ ನಡೆದಿದೆ.
ಅಪಘಾತ ಪರಿಣಾಮ ಪಿಕಪ್ ಚಾಲಕನಿಗೆ ಗಾಯವಾಗಿದೆ.
ಹೊಸ ರಸ್ತೆಯಾದ ಬಳಿಕ ಈ ಪರಿಸರದಲ್ಲಿ ಸಂಭವಿಸಿದ ಮೂರನೇ ಅಪಘಾತ ಪ್ರಕರಣ ಇದಾಗಿದ್ದು, ಅಗತ್ಯ ಸೂಚನಾ ಫಲಕ ನಿರ್ಮಿಸುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.