ಮಂಗಳೂರು : ವಾಣಿಜ್ಯ ಕಟ್ಟಡದರಲ್ಲಿರುವ ಬ್ಯಾಂಕ್ ಗೆ ಬೆಂಕಿ ಸಂಭವಿಸಿರುವ ಘಟನೆ ಬಂಟ್ಸ್ ಹಾಸ್ಟೆಲ್ ಬಳಿಯ ಕರಂಗಲಪಾಡಿಯ ಬಳಿ ಇಂದು ಘಟನೆ ನಡೆದಿದೆ.
ಶಾರ್ಟ್ ಸರ್ಕೀಟ್‌ನಿಂದ ಬ್ಯಾಂಕ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬ್ಯಾಂಕ್‌ನಲ್ಲಿ ಹೊಗೆ ಆವರಿಸಿಕೊಂಡಿದೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಸಿಬ್ಬಂದಿಗಳು ಹೊರ ಬಂದರು. ಮಧ್ಯಾಹ್ನವಾದ್ದರಿಂದ ಗ್ರಾಹಕರ ಸಂಖ್ಯೆಯೂ ಕಡಿಮೆ ಇತ್ತು. ಹಾಗಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಆದರೂ, ಈ ಬೆಂಕಿ ಅವಘಡದಿಂದಾಗಿ ಬ್ಯಾಂಕ್‌ನಲ್ಲಿದ್ದ ದಾಖಲೆಗಳು ಸುಟ್ಟುಹೋಗಿದೆ.
ಘಟನಾ ಸ್ಥಳಕ್ಕೆ ತಕ್ಷಣವೇ ಅಗ್ನಿ ಶಾಮಕ ದಳದ ಸಿಬಂದಿ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.