ಉಪ್ಪಿನಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ಮಾಡಿದರು.

ಮಹಾಶಿವರಾತ್ರಿಯ ದಿನ 2 ಮಖೆ ಉತ್ಸವದ ಮರುದಿನ ಫೆ. 27 ಗುರುವಾರದಂದು ದೇವಸ್ಥಾನದ ಸುತ್ತ ಮುತ್ತ ಸ್ವಚ್ಛತೆಯನ್ನು ಮಾಡಲಾಯಿತು.
ಸ್ವಚ್ಛತಾ ಕಾರ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಗೋಪಾಲ, ರಮೇಶ, ಕೇಶವ, ಕೃಷ್ಣಪ್ಪ, ಅಶೋಕ, ಮಮತಾ, ಸುನಂದಾ, ಚಂದ್ರಾವತಿ, ಜಗದೀಶ, ಶೀನಪ್ಪ, ವೆಂಕಪ್ಪ, ಗಿರೀಶ, ಮತ್ತು ಸೇವಾಪ್ರತಿನಿಧಿ ಜಯಶ್ರೀ ಹಾಗೂ ಒಟ್ಟು 13 ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.