ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಎಪಿಎಂಸಿಯ ಸಂಪರ್ಕ ರಸ್ತೆಯಲ್ಲಿ ಅದರ್ಶ ಆಸ್ಪತ್ರೆಯ ಎದುರು ಹೆಚ್ಚೇನು ದಾಳಿ ನಡೆಸಿರುವ ಘಟನೆ ಇಂದು ಬೆಳಿಗ್ಗೆ ಸುಮಾರು 9.30ರ ಹೊತ್ತಿಗೆ ಪುತ್ತೂರಿನಲ್ಲಿ ಈ ಘಟನೆ ನಡೆದಿದೆ.
ಹೆಚ್ಚೇನು ದಾಳಿಯಿಂದ ಸುಮಾರು 10 ರಿದ 15 ಜನರಿಗೆ ಗಾಯಗಳಾಗಿದ್ದು, ಹೆಜ್ಜೇನು ದಾಳಿಯಿಂದ ಅಸ್ವಸ್ಥಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಗ್ಗೆ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿಗಳಿಗೆ ಹಾಗೂ ಕೆಲಸಕ್ಕೆ ಹೊರಟ ಕೆಲವರಿಗೆ ಹೆಚ್ಚೇನು ದಾಳಿ ನಡೆಸಿದೆ. ಅಲ್ಲದೇ ಹೆಜ್ಜೆನು ವ್ಯಕ್ತಿಯೋರ್ವರ ಮೇಲೆ ಸುಮಾರು 20 ನಿಮಿಷಗಳ ಕಾಲ ದಾಳಿ ಮಾಡಿದೆ ಎನ್ನಲಾಗಿದೆ.