ಕಾಣಿಯೂರು: ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ವರ್ಷಾವಧಿ ಜಾತ್ರೋತ್ಸವವು ಫೆ24, 25ರಂದು ನಡೆಯಿತು. ಫೆ 25ರಂದು ಬೆಳಿಗ್ಗೆ ಬ್ರಹ್ಮಶ್ರೀ ನಿಲೇಶ್ವರ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈಧಿಕ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಗಣಪತಿ ಹವನ, ಜಂಬಶುದ್ದಿ, ಕಲಶ ಪೂಜೆ, ಕಲಶಾಭಿಷೇಕ, ನಾಗತಂಬಿಲ, ಕಲ್ಲುರ್ಟಿ ತಂಬಿಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪರಾಧನೆ, ಮಹಾಪೂಜೆ, ರಾತ್ರಿ ಶ್ರೀ ದೇವರ ಬಲಿ ಉತ್ಸವ, ಕಟ್ಟೆ ಪೂಜೆ, ಬಟ್ಟಲು ಕಾಣಿಕೆ. ಮಂತ್ರಾಕ್ಷತೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಮಂಗಳೂರು ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ‘ಮುಗುರು ಮಲ್ಲಿಗೆ’ ಎಂಬ ನವರಸ ಭರಿತ ತುಳು ಹಾಸ್ಯಮಯ ಕಥಾನಕ ಯಕ್ಷಗಾನ ಬಯಲಾಟ ನಡೆಯಿತು. ಫೆ 24ರಂದು ಬೆಳಿಗ್ಗೆ ತೋರಣ ಮುಹೂರ್ತ, ಸಂಜೆ ಭಕ್ತಾಧಿಗಳಿಂದ ಹಸಿರುಕಾಣಿಕೆ ಸಮರ್ಪಣೆ, ತಂತ್ರಿಗಳ ಆಗಮನ, ಪ್ರಾರ್ಥನೆ, ವಾಸ್ತು ರಾಕ್ಷೋಘ್ನ ಹೋಮ, ಕಲಶಾಭಿಷೇಕ, ರಾತ್ರಿ ಪೂಜೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಅನ್ನುವಂಶಿಕ ಮೊಕ್ತೇಸರರಾದ ಹರಿಯಪ್ಪ ಗೌಡ ನಾವೂರು, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಬೊಬ್ಬೆಕೇರಿ, ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಪೂದೆ, ಆಡಳಿತ ಸಮಿತಿ ಅಧ್ಯಕ್ಷ ಹರ್ಷಿತ್ ನಿಡ್ಡಾಜೆ, ಕಾರ್ಯದರ್ಶಿ ಪುನೀತ್ ಕೆ.ಜೆ, ಜತೆ ಕಾರ್ಯದರ್ಶಿ ಮೋನಪ್ಪ ಬಂಡಾಜೆ, ಉಪಾಧ್ಯಕ್ಷ ಪ್ರದೀಪ್ ಬೊಬ್ಬೆಕ್ಕೇರಿ, ಕೋಶಾಧಿಕಾರಿ ಹರೀಶ್ ಪೈಕ, ಮೊಕ್ತೇಸರರಾದ ಪುಟ್ಟಣ್ಣ ಗೌಡ ಪೈಕ, ನಾಗೇಶ್ ರೈ ಮಾಳ, ವಿವೇಕ್ ನಿಡ್ಡಾಜೆ, ಜಯಪ್ರಸಾದ್ ರೈ ಚೆಲ್ಯಡ್ಕ ಕುಂಡುಳಿ, ಭಾಸ್ಕರ ಗೌಡ ಮುರುಳ್ಯ, ಕೃಷ್ಣಪ್ಪ ಗೌಡ ಬೀರ್ನೆಲು, ಸದಾನಂದ ರೈ ಮಾಲೆಂಗ್ರಿ, ನಾವೂರು ಶ್ರೀ ಸುಬ್ರಹ್ಮಣ್ಯ ಭಜನಾ ಮಂಡಳಿ ಗೌರವಾಧ್ಯಕ್ಷ ಜಯರಾಮ ಗೌಡ ಬಂಡಾಜೆ, ಅಧ್ಯಕ್ಷ ಅನಂತ್ ಕುಮಾರ್ ಬೈಲಂಗಡಿ, ಕಾರ್ಯದರ್ಶಿ ಭರತ್ ಬಾರೆತ್ತಡಿ ಹಾಗೂ ಬೈಲುವಾರು ಆಡಳಿತ ಸಮಿತಿ ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.