ನೆಲ್ಯಾಡಿ: ಚಲಿಸುತ್ತಿದ್ದ ಲಾರಿಯಿಂದ ಜಿಗಿದು ನಿರ್ವಾಹಕರೊಬ್ಬರು ಸಾವನ್ನಪ್ಪಿದ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪದ ಅಡ್ಡಹೊಳೆ ಎಂಬಲ್ಲಿ ಮಂಗಳವಾರ ಮುಂಜಾನೆ ನಡೆಸಿದೆ.
ತಮಿಳುನಾಡಿನ ನಾಗಪಟ್ಟಣದ ಚೆನ್ನತೂಬೂರು ನಿವಾಸಿ ಲಕ್ಷ್ಮಣನ್ ಸೆಂಗುತ್ತುವನ್ (46) ಲಾರಿಯಿಂದ ಜಿಗಿದು ಮೃತಪಟ್ಟವರು.
ತಮಿಳುನಾಡಿನ ಕೃಷ್ಣಗಿರಿಯಿಂದ ಕಲ್ಲಂಗಡಿಯನ್ನು ತುಂಬಿಕೊಂಡು ಮಂಗಳೂರಿಗೆ ಬರುತ್ತಿದ್ದ ಲಾರಿಯು ಗುಂಡ್ಯ ಸಮೀಪದ ಅಡ್ಡಹೊಳೆ ತಲುಪುತಿದ್ದಂತೆ ಏಕಾಏಕಿಯಾಗಿ ನಿರ್ವಾಹಕ ಲಾರಿಯಿಂದ ಜಿಗಿದು ರಸ್ತೆಗೆ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ದೇಹವನ್ನು ಪುತ್ತೂರಿನ ಶವಗಾರಕ್ಕೆ ಕೊಂಡಯ್ಯಲಾಗಿದೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.