ಪುತ್ತೂರು: ತಾಲೂಕಿನ ಮಚ್ಚಿಮಲೆ ಬಲ್ನಾಡು ರಸ್ತೆಯಲ್ಲಿ ಹಿಂದಿನ ಮಳೆಗಾಲದಲ್ಲಿ ಗುಡ್ಡ ಕುಸಿತದಿಂದ ಅನಾಹುತದಿಂದಾದ ರಸ್ತೆ ಹಾನಿಯಾದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿ ಯಾವ ರೀತಿಯಾಗಿ ರಸ್ತೆ ಸರಿಪಡಿಸಿ ಪರಿಹಾರ ನೀಡಬಹುದು ಎಂಬ ಬಗ್ಗೆ ಸ್ಥಳೀಯರ ಮನವಿಯ ಮೇರೆಗೆ ಪರಿಶೀಲನೆ ನಡೆಸಿ ಮಚ್ಚಿಮಲೆ ನಿವಾಸಿಗಳ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಇರುವ ಶಿಥಲವಾದ ಬ್ರಿಡ್ಜ್ ಹಾಗೂ ತೋಡಿನ ಬದಿಯಲ್ಲಿ ಕಾಲುದಾರಿ ಸವಕಳಿ ಉಂಟಾಗಿರುವುದನ್ನು ವೀಕ್ಷಣೆ ಮಾಡಿ ಸ್ಥಳಿಯರ ಮನವಿಯನ್ನು ಸ್ವೀಕರಿಸಿ ಸರಕಾರದಿಂದ ಸೂಕ್ತ ಹಾಗೂ ಶಾಶ್ವತವಾದ ಪರಿಹಾರ ಕಾರ್ಯ ಮಾಡುವ ಬಗ್ಗೆ ಭರವಸೆ ನೀಡಿದರು.
ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ ಬಿ , ಉಪಾಧ್ಯಕ್ಷರಾದ ಯುವರಾಜ ಪೆರಿಯತ್ತೋಡಿ, ಸಂತೋಷ್ ಕೈಕಾರ, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿಧ್ಯಾಧರ್ ಜೈನ್ , ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿದ್ಯಾ ಆರ್ ಗೌರಿ , ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಮಚ್ಚಿಮಲೆ ವಿರೂಪಾಕ್ಷ ಭಟ್ , ಮಣಿಕಂಠ, ನಾಗೇಂದ್ರ , ನಿರಂಜನ್, ಸುಮಿತ್ ಭಟ್ ನಗರ ಸಭೆ ಸದಸ್ಯೆ ದೀಕ್ಷಾ ಪೈ, ವಿಶ್ವನಾಥ ಕುಲಾಲ್ , ಸುಬ್ರಹ್ಮಣ್ಯ ಕುಂಜೂರು, ಜಾನು ನಾಯ್ಕ, ಈಶ್ವರ ಮಚ್ಚಿಮಲೆ, ಲೀಲಾವತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು