ಮೂಡೂರು-ಪಡೂರು ಬಯಲು ಕಂಬಳಕ್ಕೆ ಆಗಮಿಸಲಿದ್ದಾರೆ ಸಿದ್ದರಾಮಯ್ಯ

ಮಾ.8ರಂದು ಬಂಟ್ವಾಳದ ಕೊಡಿಬೈಲಿನಲ್ಲಿ ಜೋಡುಕರೆ ಕಂಬಳ

ಬಂಟ್ವಾಳ : ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ ನಡೆಯಲಿರುವ 14ನೇ ವರ್ಷದ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿತ ಹಲವು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ. ಮಾರ್ಚ್ 8ರಂದು ಈ ಕಂಬಳ ನಡೆಯಲಿದ್ದು, ಅಧಿವೇಶನ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲು ಒಪ್ಪಿದ್ದಾರೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ.

ದಿ.ಆಲ್ಬರ್ಟ್ ಪಾಯಸ್ ಕೂಡಿಬೈಲು ವೇದಿಕೆಯಲ್ಲಿ ಅಂದು ಬೆಳಗ್ಗೆ 8.45ಕ್ಕೆ ಸೋಲೂರು ಆರ್ಯ-ಈಡಿಗ ಮಹಾ ಸಂಸ್ಥಾನ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ, ಅಲ್ಲಿಪಾದೆ ಸೈಂಟ್ ಆಂಟನಿ ಚರ್ಚ್ ಧರ್ಮಗುರು ರಾಬರ್ಟ್ ಡಿಸೋಜ, ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲ ಕಂಬಳ ಉದ್ಘಾಟಿಸುವರು ಎಂದು ತಿಳಿಸಿದ್ದಾರೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top