ಪುತ್ತೂರು: ಕಿಕ್ಕಿರಿದ ಪ್ರೇಕ್ಷಕ ಸಂದಣಿಯ ಹಿನ್ನೆಲೆಯಲ್ಲಿ ಫೆಬ್ರುವರಿ 25 ಮಂಗಳವಾರ ಮತ್ತು 26 ಬುಧವಾರಗಳಂದು ಮಹಾಶಿವರಾತ್ರಿಯ ಪ್ರಯುಕ್ತ ಮಯೂರ್ ಅಂಬೆಕಲ್ಲು ಚಿತ್ರ ಕತೆ ಬರೆದು, ಸಂಗೀತ ನೀಡಿ ನಿರ್ದೇಶಿಸಿದ ಚೊಚ್ಚಲ ಸಿನಿಮಾ ಭಾವ ತೀರ ಯಾನ ದ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.
ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟ್ನರ್ ಆಗಿ ಲೋಕಾರ್ಪಣೆ ಗೊಳಿಸಿರುವ ಈ ಚಿತ್ರ ಇದೀಗ ವಿಶೇಷ ದರ ಕಡಿತದೊಂದಿಗೆ, ರೂ. 180/ರ ಬದಲಿಗೆ ಕೇವಲ ರೂ. 150/-ರ ದರದಲ್ಲಿ 25/02/25ನೇ ಮಂಗಳವಾರ ಸಂಜೆ 4-45ಕ್ಕೆ ಒಂದು ದೇಖಾವೆ ಮತ್ತು ಶಿವರಾತ್ರಿಯ ದಿನವಾದ 26/02/2025ನೇ ಬುಧವಾರದಂದು ಅಪರಾಹ್ನ 1-45ಕ್ಕೆ ಮತ್ತು ಸಂಜೆ 7-30ಕ್ಕೆ ಎರಡು ದೇಖಾವೆಗಳು ಇರುತ್ತವೆ. ಈ ಎಲ್ಲಾ ದೇಖಾವೆಗಳಿಗೆ ವಿಶೇಷ ದರ ರೂ. 150/- ಮಾತ್ರವೇ ಇರುತ್ತದೆ.
ಸಿನಿಪ್ರಿಯರು ಈ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕಾಗಿ ನಿರ್ಮಾಪಕ ಶೈಲೇಶ್ ಅಂಬೆಕಲ್ಲು ಕೋರಿದ್ದಾರೆ.
ತಾರಾಗಣದಲ್ಲಿ ಹಿರಿಯ ನಟ ರಮೇಶ್ ಭಟ್, ವಿದ್ಯಾಮೂರ್ತಿಯವರ ಜೊತೆಗೆ ನಾಯಕ ನಟ ತೇಜಸ್ ಕಿರಣ್, ತ್ರಿವಳಿ ನಾಯಕಿಯರಾದ ಅನೂಷಕೃಷ್ಣ, ಆರೋಹಿ ನೈನಾ ಮತ್ತು ಚಂದನ ಅನಂತಕೃಷ್ಣ ಅವರ ಮನೋಜ್ಞ ಅಭಿನಯದಿಂದ ರಂಗೇರಿರುವ ಭಾವ ತೀರ ಯಾನ ಕ್ಕೆ ಪ್ರೇಕ್ಷಕರ ಅದ್ಭುತ ಮೆಚ್ಚುಗೆ ವ್ಯಕ್ತವಾಗುತ್ತಿದೆ