ಪುತ್ತೂರು: ನ್ಯೂಸ್ ಪುತ್ತೂರು Media Partener ಆಗಿದ್ದುಕೊಂಡು ಪುತ್ತೂರಿನ GL ONEನ ಭಾರತ್ ಸಿನಿಮಾಸ್ ನ Screen 2ರಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ, ಯುವ ಪ್ರತಿಭೆ ಮಯೂರ್ ಅಂಬೆಕಲ್ಲು ಕತೆ, ಚಿತ್ರಕತೆ ಬರೆದು, ಸಂಗೀತ ನೀಡಿ ನಿರ್ದೇಶಿದ ಚೊಚ್ಚಲ ಸಿನಿಮಾ ‘ಭಾವ ತೀರ ಯಾನ’ದ ಪ್ರದರ್ಶನದ ವೇಳೆಯನ್ನು ಇಂದಿನಿಂದ ಸಂಜೆ 4.45ಕ್ಕೆ ಮರು ನಿಗದಿಗೊಂಡಿದೆ.
ಭಾವನೆಗಳ ಸುಂದರವಾದ ಹೊಸೆಯುವಿಕೆಯ ಮೂಲಕ ಸಹೃದಯಿ ಪ್ರೇಕ್ಷಕರ ಹೃದಯಗಳಿಗೆ ಲಗ್ಗೆಯಿಟ್ಟು ಕಣ್ಣಂಚಲ್ಲಿ ನಾಲ್ಕು ಹನಿ ಉದುರಿಸಿ ಬದುಕಿನ ಸತ್ಯಗಳನ್ನು ತೆರೆದಿಡುವ ಅಪರೂಪದ ಮಿಶ್ರಣವುಳ್ಳ ಈ ಸಿನಿಮಾದ ಪ್ರೇಕ್ಷಕ ವರ್ಗದ ಬೇಡಿಕೆಯಂತೆ ಅವರ ಅನುಕೂಲಕ್ಕಾಗಿ ಪ್ರದರ್ಶನದ ವೇಳೆಯನ್ನು ಸಂಜೆ 4.15ರ ಬದಲಾಗಿ 4.45ಕ್ಕೆ ನಿಗದಿಗೊಳಿಸಲಾಗಿದೆ.
ಬಂಟ್ವಾಳ, ಬೆಳ್ತಂಗಡಿ, ಕಡಬ, ಸುಳ್ಯ, ಕಾಸರಗೋಡು ಪರಿಸರಗಳಿಂದ ತಂಡೋಪತಂಡವಾಗಿ ಪ್ರೇಕ್ಷಕರು ಆಗಮಿಸುತ್ತಿದ್ದಾರೆ. ಟಿಕೆಟ್ ಗಳನ್ನು ಕೌಂಟರ್ ಗಳಲ್ಲಿ ಪಡೆಯುವುದರ ಜೊತೆಗೆ Book My Show Appನಲ್ಲೂ ಪಡೆದುಕೊಳ್ಳಬಹುದಾಗಿದೆ ಎಂದು ನಿರ್ಮಾಪಕ ಶೈಲೇಶ್ ಅಂಬೆಕಲ್ಲು ತಿಳಿಸಿದ್ದಾರೆ.