ಪುತ್ತೂರು: ಈಶ್ವರಮಂಗಲ ಸಾಂತ್ಯ ನಿವಾಸಿ ನವೀನ್ (42ವ) ರವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.
ಕಳೆದ 15 ವರ್ಷದಿಂದ ನಾರಾಯಣ ಗೌಡ ಉರಿಕ್ಯಾಡಿ ಅವರ ಮಾಲಕತ್ವದ ಶ್ರೀ ಗಜವದನ ಗೂಡ್ಸ್ ಸರ್ವೀಸಸ್ ಲಾರಿಯಲ್ಲಿ ಚಾಲಕರಾಗಿದ್ದ ಅವರು ಗೋಡೌನ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈಶ್ವರಮಂಗಲ ಹೊರಠಾಣೆಯ ಎಎಸ್‌ಐ ಚಂದ್ರಶೇಖರ್ ಮತ್ತು ಸಿಬ್ಬಂದಿಗಳು ಶವದ ಮಹಜರು ನಡೆದಿದ್ದಾರೆ. ಮೃತರು ತಂದೆ, ತಾಯಿ, ಪತ್ನಿಯನ್ನು ಅಗಲಿದ್ದಾರೆ.