ಪುತ್ತೂರು: 110/33/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ಪಾಲನಾ ಕಾರ್ಯ ಹಾಗೂ ಕಾವು-ಸುಳ್ಯ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ವೃತ್ತದ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ಇರುವುದರಿಂದ ಫೆ.25 ಮಂಗಳವಾರ ಬೆಳಗ್ಗೆ 9.30 ರಿಂದ ಸಂಜೆ 5 ಗಂಟೆಗೆ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು.
110/33/11 ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಿಂದ ಹೊರಡುವ 33/11 ಕೆವಿ ಬೆಳ್ಳಾರೆ ಹಾಗೂ 33/11 ಕೆವಿ ಕಾವು ಮತ್ತು ಸುಳ್ಯ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದ್ದರಿಂದ 110/33/11 ಕೆವಿ ಮಾಡಾವು ಹಾಗೂ 33/11 ಕೆವಿ ಬೆಳ್ಳಾರೆ, ಕಾವು, ಸುಳ್ಯ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್ ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಗ್ರಾಹಕರು ಗಮನಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.