ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಸಂಘದ 12 ಸ್ಥಾನಗಳಲ್ಲಿ 11 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತದ ಸಹಕಾರ ಭಾರತಿ, 1 ರಲ್ಲಿ ಕಾಂಗ್ರೆಸ್ ಬೆಂಬಲಿತದ ರೈತಸ್ನೇಹಿ ಬಳಗದ ಅಭ್ಯರ್ಥಿ ಜಯ ಸಾಧಿಸಿದ್ದಾರೆ.
ಆ ಮೂಲಕ ಆಡಳಿತಾರೂಢ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಸಹಕಾರ ಭಾರತಿಯು ಬಹುಮತದೊಂದಿಗೆ ಅಧಿಕಾರ ಪಡೆದುಕೊಂಡಿದೆ.
ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಸಹಕಾರ ಭಾರತಿ ಅಭ್ಯರ್ಥಿಗಳಾಗಿದ್ದ ತೀರ್ಥಾನಂದ ದುಗ್ಗಳ, ಜನಾರ್ಧನ ಗೌಡ ಪಿ, ರಾಜೇಶ್ ಗೌಡ ಕುದ್ರುಳಿ, ಸತೀಶ್ ಪಾಂಬಾರು, ಕಾಂಗ್ರೆಸ್ ಬೆಂಬಲಿತರಾಗಿದ್ದ ಪವನ್ ದೊಡ್ಡಮನೆ, ಮಹಿಳಾ ಸ್ಥಾನದಿಂದ ಸಹಕಾರ ಭಾರತಿ ಅಭ್ಯರ್ಥಿಗಳಾಗಿದ್ದ ಜಲಜಾಕ್ಷಿ ಮಾಧವ ಗೌಡ ಕುಂಟಿಕಾನ, ಸುನಂದ ಲೋಕನಾಥ ಗೌಡ ಬಾಯಂಬಾಡಿ, ಹಿಂದುಳಿದ ವರ್ಗ ಬಿ ಸ್ಥಾನದಿಂದ ಪ್ರಭಾಕರ ರೈ ಕೊಂರ್ಬಡೆ, ಹಿಂದುಳಿದ ವರ್ಗ ಎ ಸ್ಥಾನದಿಂದ ಪ್ರವೀಣ ಜಿಕೆ, ಪರಿಶಿಷ್ಟ ಪಂಗಡ ಸ್ಥಾನದಿಂದ ಅಣ್ಣಪ್ಪ ನಾಯ್ಕ ಬಿ, ಪರಿಶಿಷ್ಟ ಸ್ಥಾನದಿಂದ ಕರಿಯ, ಸಾಲಗಾರರಲ್ಲದ ಸ್ಥಾನದಿಂದ ಪ್ರೇಮಾ ಗಂಗಾಧರ ಗೌಡ ಕುಂಟಿಕಾನರವರು ಜಯಭೇರಿ ಬಾರಿಸಿದ್ದಾರೆ.