ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವಿಟ್ಲ ಯೋಜನಾ ಕಛೇರಿ ವ್ಯಾಪ್ತಿಯ ಸೇವಾಪ್ರತಿನಿಧಿಗಳಿಗೆ 2025-2026 ನೇ ಸಾಲಿನ ಸಂಪೂರ್ಣ ಸುರಕ್ಷಾ ಹಾಗೂ ಹಿಡುವಳಿ ಯೋಜನೆ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಕಾರ್ಯಕ್ರಮವನ್ನುಉದ್ಘಾಟಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು.
ಜಿಲ್ಲಾ ವಿಮಾ ಸಮನ್ವಯಧಿಕಾರಿ ಜನಾರ್ಧನ ಇವರು ಸುರಕ್ಷಾದಲ್ಲಿ ಸಿಗುವ ಸಾಲಭ್ಯ, ಪಾಕೇಜ್, ಬೇಕಾದ ದಾಖಲಾತಿ ಬಗ್ಗೆ ಸಂಘದ ಸದಸ್ಯರಿಗೆ ಮಾಹಿತಿ ನೀಡಿ ಸುರಕ್ಷಾ ನೋಂದಾವಣೆ ಮಾಡುವ ಬಗ್ಗೆ ಸೇವಾಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ತಾಲ್ಲೂಕು ಕೃಷಿ ಅಧಿಕಾರಿ ಚಿದಾನಂದ ಹಿಡುವಳಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಈ ಸಭೆಯಲ್ಲಿ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು, ಕಛೇರಿ ಸಹಾಯಕ ಪ್ರಬಂಧಕರು, ಕಛೇರಿ ಸಿಬ್ಬಂದಿ, ತಾಲೂಕಿನ ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.