ಸತತ ಟೀಕೆಗಳ ಬಳಿಕ ಎಚ್ಚೆತ್ತ ಸರಕಾರ
ಬೆಂಗಳೂರು: ಮಹಿಳೆಯರು ಕಳೆದ ಮೂರು ತಿಂಗಳಿಂದ ಕಾಯುತ್ತಿದ್ದ ಗೃಹಲಕ್ಷ್ಮಿ ಹಣ ಇಂದು ಬಿಡುಗಡೆಯಾಗಲಿದೆ. ಸಾಲು ಸಾಲು ಟೀಕೆ, ಆಕ್ರೋಶದ ವ್ಯಕ್ತವಾದ ನಂತರ ಎಚ್ಚೆತ್ತ ಸರಕಾರ ಮೂರು ತಿಂಗಳಿಂದ ಬಂದ್ ಆಗಿದ್ದ ಗೃಹಲಕ್ಷ್ಮಿ ಹಣ ಜಮೆ ಪ್ರಕ್ರಿಯೆಗೆ ಶುಕ್ರವಾರದಿಂದ ಚಾಲನೆ ನೀಡಲಿದೆ.
ಶುಕ್ರವಾರ ನವೆಂಬರ್ ತಿಂಗಳ ದುಡ್ಡು ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ. ಡಿಸೆಂಬರ್ ತಿಂಗಳ ದುಡ್ಡನ್ನು ಮುಂದಿನ ಸೋಮವಾರ ಫಲಾನುಭವಿಗಳ ಖಾತೆಗೆ ಹಾಕಲಾಗುತ್ತದೆ.
ಗೃಹಲಕ್ಷ್ಮಿ ಹಣ ಸ್ಥಗಿತವಾದ ಬಗ್ಗೆ ಸತತವಾಗಿ ಟೀಕೆಗಳು ವ್ಯಕ್ತವಾಗಿದ್ದವು. ಹಣ ಜಮೆ ಮಾಡುವ ಪ್ರಕ್ರಿಯೆಯನ್ನು ಬದಲಾವಣೆ ಮಾಡಿದ ಕಾರಣ ಸ್ವಲ್ಪ ವಿಳಂಬ ಆಗಿತ್ತು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹೇಳಿಕೊಂಡಿದೆ. ಇನ್ಮುಂದೆ ಗೃಹಲಕ್ಷ್ಮಿ ಹಣ ತಾಲೂಕು ಪಂಚಾಯತ್ ಇಒಗಳ ಮೂಲಕ ಬಿಡುಗಡೆ ಆಗಲಿದೆ.