ಪುತ್ತೂರು: ತುಳುನಾಡಿನ ಕರಾವಳಿಯ ಸುಳ್ಯದ ಬಹುಮುಖಿ ಪ್ರತಿಭೆ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ ನವಿರಾದ ಪ್ರೇಮ ಪ್ರೀತಿಗಳ ಭಾವನೆಯುಳ್ಳ ಸಿನಿಮಾ “ಭಾವ ತೀರ ಯಾನ” ಫೆ.21 (ನಾಳೆ) ರಾಜ್ಯಾದ್ಯಾಂತ ತೆರೆ ಕಾಣಲಿದೆ.
ಈ ಚಿತ್ರಕ್ಕೆ ಅವರೇ ಕತೆ, ಚಿತ್ರಕತೆ ಬರೆದು, ಸಂಗೀತ ನೀಡಿ, ನಿರ್ದೇಶಿಸಿದ್ದಾರೆ, ನವಿರಾದ ಪ್ರೇಮ ಪ್ರೀತಿಗಳ ಭಾವನೆಗಳ ತೀರದುದ್ದಕ್ಕೂ ಯಾನಕ್ಕೆ ಕರೆದೊಯ್ಯುವ ಸಿನಿಮಾ ಭಾವ ತೀರ ಯಾನ ಪುತ್ತೂರಿನ ಜಿಎಲ್ ಒನ್ ಮಾಲ್ ನಲ್ಲಿರುವ ಭಾರತ್ ಸಿನಿಮಾಸ್ – Screen 2 ರಲ್ಲಿ ಬಿಡುಗಡೆಯಾಗಲಿದೆ. ಆ ಪ್ರಯುಕ್ತ ಫೆ.21 ರಂದು ಶುಕ್ರವಾರ ಸಂಜೆ ಗಂಟೆ 3.45 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ.
ಚಲನಚಿತ್ರ ಮತ್ತು ಧಾರಾವಾಹಿಗಳ ಅಭಿನೇತ್ರಿ ವಸಂತಲಕ್ಷ್ಮೀ ಶಶಿಧರ್ ಉದ್ಘಾಟಿಸಲಿದ್ದಾರೆ. ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಭಾವನಾ ಬಳಗ ಸುಳ್ಯ ಇದರ ಕೆ.ಆರ್.ಗೋಪಾಲಕೃಷ್ಣ, ತುಳುನಾಡ ಪ್ರತಿಭೆ ಸುಂದರ ರೈ ಮಂದಾರ, ಕುಂಬ್ರ, ಪ್ರಸನ್ನ ಭಾಗೀನ ಬಪ್ಪಳಿಗೆ ಗೌರವ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.