ಪುತ್ತೂರು: ಹಿರಿಯರಾಗಿರುವ ಅರಿಯಡ್ಕ ಚಿಕ್ಕಪ್ಪ ನಾಯಕ್ ಅವರ 91ನೇ ಹುಟ್ಟುಹಬ್ಬ, ಹಾಗೂ ಅವರ ನವತಿ ಸಂಭ್ರಮದ ಸವಿನೆನಪಿನ “ವೀಕ್ಷಣಾಗೋಪುರ ಲೋಕಾರ್ಪಣೆ “ಕಾರ್ಯಕ್ರಮ ಗುರುವಾರ ಬಿರುಮಲೆ ಬೆಟ್ಟದಲ್ಲಿ ನಡೆಯಿತು.
ಪುತ್ತೂರಿನ ಹಿರಿಯ ಸಹೃದಯಿ ಸಾಮಾಜಿಕ ಕಳಕಳಿ ಹೊಂದಿರುವ ಈಗಾಗಲೇ ತೊಂಬತ್ತು ನವತಿ ಸಂಭ್ರಮ ಆಚರಿಸಿಕೊಂಡಿರುವ ಪುತ್ತೂರಿನ ಅರಿಯಡ್ಕ ಚಿಕ್ಕಪ್ಪ ನಾಯಕ್ ಅವರ ನವತಿ ಸಂಭ್ರಮದ ಅಂಗವಾಗಿ ಸುಮಾರು ಐದುಲಕ್ಷ ರೂ. ವೆಚ್ಚದ ವೀಕ್ಷಣಾ ಗೋಪುರವನ್ನು ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರು ಟೇಪ್ ಕತ್ತರಿಸಿ, ದೀಪ ಪ್ರಜ್ವಲನಗೊಳಿಸಿ ಲೋಕಾರ್ಪಣೆಗೊಳಿಸಿದರು. ಅವರ 91ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಕುಟುಂಬ ಸದಸ್ಯರೊಂದಿಗೆ ಆಚರಿಸಲಾಯಿತು.
ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ನಗರಸಭೆ ಆಯುಕ್ತ ಎಸ್. ಮಧು ಮನೋಹರ್, ಸಹಕಾರಿ ಯೂನಿಯನ್ ನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಸಹಕಾರಿ ಕೃಷಿ ಪರಿಷತ್ತು ಹಿರಿಯ ಸಹಕಾರಿ ಧುರೀಣ ಬೂಡಿಯಾರ್ ರಾಧಾಕೃಷ್ಣ ರೈ, ದಂಬೆಕ್ಕಾನ ಸದಾಶಿವ ರೈ, ಎಸ್ ಸಿ ಐ ಪುತ್ತೂರು ಅಧ್ಯಕ್ಷೆ ಮಲ್ಲಿಕಾ ಜೆ ರೈ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಬೀರಮಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಗಜ್ಜೀವನ್ ದಾಸ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಬ್ರಾಯ ಅಮ್ಮಣ್ಣಾಯರ ಪ್ರಾರ್ಥನೆ ಹಾಡಿದರು. ನಿವೃತ್ತ ಪ್ರಾಚಾರ್ಯ ಪ್ರೊ. ಝೇವಿಯರ್ ಡಿ’ಸೋಜಾ ಕಾರ್ಯಕ್ರಮ ನಿರ್ವಹಿಸಿದರು. ನಿತಿನ್ ಪಕ್ಕಳ ವಂದಿಸಿದರು. ನಿವೃತ್ತ ಪ್ರೊ. ದತ್ತಾತ್ರೇಯ ರಾವ್ ಸಹಕರಿಸಿದರು.