ಪುತ್ತೂರು: ದೇಶದ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮಶಾತಾದ್ಧಿಯ ಅಂಗವಾಗಿ ಬಿಜೆಪಿಯಿಂದ ಒಂದು ವರ್ಷಗಳ ಕಾಲ ನಿರಂತರ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅಂದು ವಾಜಪೇಯಿಯವರನ್ನು ಭೇಟಿ ಮಾಡಿ, ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕ ಸಂಘದ ಅಧ್ಯಕ್ಷ ವಾಮನ ಪೈ ಹಾಗೂ ಅನುರಾಧ ಪೈ ದಂಪತಿಯನ್ನು ಬಿಜೆಪಿ ವತಿಯಿಂದ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಗೌರವಿಸಿ ಮಾತನಾಡಿ, ಪ್ರಧಾನ ಮಂತ್ರಿಯಾಗಿ ಅಟಲ್ ಬಿಹಾರಿ ವಾಜಪೇಯಿಯವರು ಅಭಿವೃದ್ಧಿಯಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಡುವ ಮೂಲಕ ಮಾದರಿ ಪ್ರಧಾನ ಮಂತ್ರಿಯಾಗಿದ್ದರು. ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಅವರ ಜನ್ಮ ಶತಾಬ್ದಿಯನ್ನು ರಾಷ್ಟ್ರದಾದ್ಯಂತ ಹಳ್ಳಿಯಿಂದ ದಿಲ್ಲಯ ತನಕ ಆಚರಿಸುವ ಮೂಲಕ ಸ್ಮರಿಸಲಾಗುತ್ತಿದೆ. ಜನಸಂಘದ ಪ್ರಮುಖರಾಗಿ, ಬಿಜೆಪಿಯ ಪ್ರಥಮ ಅಧ್ಯಕ್ಷರಾಗಿ, ಪ್ರಧಾನಿಯಾಗಿ ದೇಶ ಕಂಡ ಅಜಾತಶತ್ರು ವಾಜಪೇಯಿಯವರು ನೀಡಿದ ಅಪಾರ ಕೊಡುಗೆಗಳನ್ನು ಜನ ಮಾನಸದಲ್ಲಿ ಬಿತ್ತುವ ಕಾರ್ಯವಾಗುತ್ತಿದೆ. ವಾಜಪೇಯಿಯವರು ಭೇಟಿ ನೀಡಿದ ಕಡೆಗಳಲ್ಲಿ ಅವರೊಂದಿಗೆ ಭಾಗವಹಿಸಿದ ಕಾರ್ಯಕರ್ತರನ್ನು ಜನ್ಮಶತಾಬ್ಧಿ ಕಾರ್ಯಕ್ರಮದಲ್ಲಿ ಗುರುತಿಸಿ ಗೌರವಿಸಲಾಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ವಾಮನ ಪೈ ಮಾತನಾಡಿ, ಪಕ್ಷದಲ್ಲಿ ನಿಜವಾದ ಕಾರ್ಯಕರ್ತ ಹೇಗಿರಬೇಕು ಎನ್ನುವುದನ್ನು ವಾಜಪೇಯಿಯವರು ತೋರಿಸಿಕೊಟ್ಟಿದ್ದರು. ಮಂಗಳೂರು ಸಂಘನಿಕೇತನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರದಲ್ಲಿ ಎರಡು ಸ್ಥಾನಗಳನ್ನು ಪಡೆದಿರುವ ಬಿಜೆಪಿ ಮುಂದೊಂದು ದಿನ ದೇಶವನ್ನೇ ಆಳಲಿದೆ ಎಂದು ಹೇಳುವ ಮೂಲಕ ಹುರಿದುಂಬಿಸಿತ್ತಿದ್ದರು. ಅವರ ಅವಧಿಯಲ್ಲಿ ಬಿಜೆಪಿ ದೇಶದಾದ್ಯಂತ ಭದ್ರವಾಗಿ ಬೆಳೆದಿತ್ತು. ಪುತ್ತೂರಿನ ಬಿಜೆಪಿ ಪಕ್ಷವೂ ಮತ್ತೆ ಪುತ್ತೂರಿನಲ್ಲಿ ಭದ್ರವಾಗಿ ಬೆಳೆಯಬೇಕು ಎಂದು ಹೇಳಿದರು.
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಕಾರ್ಯದರ್ಶಿ ನಾಗೇಶ್ ಪ್ರಭು, ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷರಾದ ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ, ಮಾಜಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರ ಸಭಾ ಸದಸ್ಯರಾದ ಮನೋಹರ್ ಕಲ್ಲಾರೆ, ಶಶಿಕಲಾ ಸಿ.ಎಸ್., ದೀಕ್ಷಾ ಪೈ, ಡಾ.ಗೋಪಿನಾಥ ಪೈ, ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ನಿತೀಶ್ ಶಾಂತಿವನ, ರಾಜೇಶ್ ಬನ್ನೂರು, ಚಂದ್ರಶೇಖರ ರಾವ್ ಬಪ್ಪಳಿಗೆ, ಮಣಿಕಂಠ, ವಿಶ್ವನಾಥ ಕುಲಾಲ್, ವಾಮನ್ ಪೈಯವರ ಪುತ್ರ ನರಸಿಂಹ ಪೈ ಹಾಗೂ ಮನೆಯ ಉಪಸ್ಥಿತರಿದ್ದರು. ಜನ್ಮಶತಾಬ್ಧಿ ಕಾರ್ಯಕ್ರಮದ ಸಂಚಾಲಕ ಯುವರಾಜ ಪೆರಿಯತ್ತೋಡಿ ಸ್ವಾಗತಿಸಿದರು. ಸಹ ಸಂಚಾಲಕಿ ವಸಂತ ಲಕ್ಷ್ಮೀ ವಂದಿಸಿದರು.