ಬೆಳ್ತಂಗಡಿ ಮತ್ತು ಪುತ್ತೂರು ಮುಳಿಯದಲ್ಲಿ Gem Stone ಉತ್ಸವದ ಸಂಭ್ರಮ

ಬೆಳ್ತಂಗಡಿ : ನವೀನತೆ ಹಾಗೂ ಪರಿಶುದ್ಧತೆ ಆಭರಣದ ಮೂಲಕ ಮನೆ ಮಾತಾಗಿರುವ ಮುಳಿಯ ಜ್ಯುವೆಲ್ಸ್ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ಪೆ.15 ರಿಂದ ಆರಂಭಗೊಂಡಿದ್ದು ಫೆ 28 ರವರೆಗೆ Gem stone ಉತ್ಸವ ನಡೆಯಲಿದೆ.

ಗ್ರಾಹಕರಿಗೆ ವಿಶೇಷತೆಗಳನ್ನು ನೀಡುತ್ತಾ ಬಂದಿರುವ ಮುಳಿಯದಲಿ 13 ದಿನಗಳ ಕಾಲ gem Stone ಉತ್ಸವದಲ್ಲಿ ಒಂಬತ್ತು ವಿಭಿನ್ನ ರತ್ನದ ಕಲ್ಲುಗಳನ್ನು ಒಳಗೊಂಡಿರುವ ಮಾಣಿಕ್ಯ, ಮುತ್ತು, ಹವಳ, ಪಚ್ಚೆ, ಪುಷ್ಯರಾಗ, ವಜ್ರ, ನೀಲ, ಗೋಮೇಧಿಕ ಮತ್ತು ವೈಢೂರ್ಯ ಗಳಾದ ನವರತ್ನ  ಆಭರಣಗಳ ಉತ್ಸವದ ಮೂಲಕ ಗ್ರಾಹಕರಿಗೆ ಹೊಸತನವನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ನವರತ್ನ ಆಭರಣಗಳಾದ ಉಂಗುರ , ನೆಕ್ಲೇಸ್, ಬ್ರೇಸ್ಲೆಟ್ಸ್, ಪದಕ, ಬಳೆ ಮತ್ತು  ಸರಗಳು ಅಧಿಕ ವಿನ್ಯಾಸದ ನವರತ್ನ ಆಭರಣಗಳ ಅಮೋಘ ಸಂಗ್ರಹವಿದೆ.  ಮಹಿಳೆಯರ ಮನಸೂರೆಗೊಳಿಸುವ ರೀತಿಯಲ್ಲಿ ಚಿನ್ನಾಭರಣದ ಸಂಗ್ರಹ ಹೊಂದಿರುವ ಮುಳಿಯದಲ್ಲಿ ಗ್ರಾಹಕರು ಉತ್ಸವದ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗೂ ಮುಳಿಯ ಮಳಿಗೆಯಲಿ Gem Stone ಉತ್ಸವದ ಅನಾವರಣ ಮಾಡಲಾಯಿತು.

 ಮುಖ್ಯ ಅತಿಥಿಗಳಾಗಿ ಗುರುವಾಯನಕೆರೆಯ ಎಕ್ಸೆಲ್ ಕಾಲೇಜ್ ನ ಉಪನ್ಯಾಸಕರುಗಳಾದ ಸಹನಾ ಜೈನ್, ನಿಶಾ ಪೂಜಾರಿ, ಶ್ರುತಿ ಶೆಟ್ಟಿ  ಅನಾವರಣಗೊಳಿಸಿದರು. ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ಶಾಖಾ ಪ್ರಬಂಧಕಾರದ ಲೋಹಿತ್ ಕುಮಾರ್ ಹಾಗೂ ಉಪಶಾಖ ಪ್ರಬಂಧಕಾರದ ದಿನೇಶ್ ಮತ್ತು ಮುಳಿಯ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top