ತಮಿಳುನಾಡು: ಮೊಬೈಲ್ ಫೋನ್ ಗಾಗಿ ನಡೆದ ಜಗಳದಲ್ಲಿ ಅಣ್ಣ ಮತ್ತು ತಂಗಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಪುದುಕ್ಕೊಟ್ಟೆಯಲ್ಲಿ ನಡೆದಿದೆ.
18 ವರ್ಷದ ಅಣ್ಣ ಹಾಗೂ 11 ವರ್ಷದ ತಂಗಿ ಮಕ್ಕಳು ಸಾವಿಗೀಡಾದ ಸಹೋದರ-ಸಹೋದರಿಯರು ಎಂದು ತಿಳಿದು ಬಂದಿದೆ. ಮನೆಯಲ್ಲಿ ಅಣ್ಣ ಮತ್ತು ತಂಗಿಯ ನಡುವೆ ಸಣ್ಣ ಜಗಳವಾಗಿದೆ. ಈ ವೇಳೆ ಕೋಪಗೊಂಡ ಅಣ್ಣ ತನ್ನ ತಂಗಿಯ ಫೋನ್ ಮುರಿದಿದ್ದಾನೆ. ಬೇಸರಗೊಂಡ ತಂಗಿ ಬಾವಿಗೆ ಹಾರಿದ್ದಾಳೆ. ನಂತರ ತಂಗಿ ಬಾವಿಗೆ ಹಾರಿದ್ದನ್ನು ನೋಡಿ ಕಾಪಾಡಲೆಂದು ಅಣ್ಣನೂ ಬಾವಿಗೆ ಹಾರಿದ್ದಾನೆ. ಆದರೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ಹೊರತೆಗೆದಿದ್ದಾರೆ. ನಂತರ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಮಕ್ಕಳನ್ನು ಕಳೆದುಕೊಂಡ ಹೆತ್ತವರ ಅಕ್ರಂದನ ಮುಗಿಲು ಮುಟ್ಟಿದೆ.