ಮಂಗಳೂರು: ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಬೆಂಚ್ ಮೇಲೆ ನಿಶಕ್ತಿಯಿಂದ ಮಲಗಿದ್ದ ವ್ಯಕ್ತಿಗೆ ರೈಲ್ವೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪೊಲೀಸರು ಹಲ್ಲೆ ಮಾಡಿದ ಪರಿಣಾಮ ಕಾಲು ತುಂಡರಿಸುವಂತಾಗಿದೆ ಎಂದು ಕೇರಳ ಮೂಲದ ವಾಯುಪಡೆಯ ನಿವೃತ್ತ ಅಧಿಕಾರಿ ಪಿ.ವಿ. ಸುರೇಶನ್ ಎಂಬವರ ಆರೋಪವನ್ನು ದಕ್ಷಿಣ ರೈಲ್ವೇಯ ಪಾಲಕ್ಕಾಡ್ ವಿಭಾಗ ತಳ್ಳಿಹಾಕಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ಚಿತ್ರಣ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕರ್ತವ್ಯದಲ್ಲಿದ್ದ ರೈಲ್ವೆ ಪೊಲೀಸ್ ಸಿಬ್ಬಂದಿ ಫೆ.1 ರಂದು ದೂರುದಾರ ಸುರೇಶನ್‌ಗೆ ರೈಲು ನಿಲ್ದಾಣದ ಫುಡ್ ಪ್ಲಾಝಾ ರೆಸ್ಟೋರೆಂಟ್ ಬಳಿಯಿಂದ ಸಾಗುವಂತೆ ಸಲಹೆ ನೀಡಿದ್ದಾರೆ. ಆ ವೇಳೆ ಯಾರ ಸಹಾಯವೂ ಇಲ್ಲದೆ ಸುರೇಶನ್ ನಡೆದುಕೊಂಡು ಹೋಗಿದ್ದಾರೆ. ಈ ದೃಶ್ಯಾವಳಿಯನ್ನು ಸರಕಾರಿ ರೈಲ್ವೆ ಪೊಲೀಸರಿಗೆ ತಲುಪಿಸಲಾಗಿದೆ.
ಕುಡಿದ ಅಮಲಿನಲ್ಲಿ ಸುರೇಶನ್ ನಿಲ್ದಾಣದ ಬೆಂಚಿನಲ್ಲಿ ಮಲಗಿದ್ದರು. ಹಾಗಾಗಿ ಅಲ್ಲಿಂದ ತೆರಳುವಂತೆ ಆತನಿಗೆ ಸೂಚಿಸಲಾಗಿತ್ತು. ಅದರಂತೆ ಸುರೇಶನ್ ಅಲ್ಲಿಂದ ತೆರಳಿದ್ದಾರೆ. ರೈಲ್ವೆ ಪೊಲೀಸರು ಹಲ್ಲೆ ಮಾಡಿರುವ ಕುರಿತು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಸುರೇಶನ್ ನಿಶಕ್ತಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ವೈದ್ಯಕೀಯ ದಾಖಲೆಗಳ ಪ್ರಕಾರ ಅಧಿಕ ರಕ್ತದೊತ್ತಡ ಮತ್ತು ಮಧುಮೇಹವಿದ್ದು, ಆ ಕಾರಣಕ್ಕೆ ಸುರೇಶನ್‌ನ ಕಾಲನ್ನು ಕತ್ತರಿಸಬೇಕಾದ ಅನಿವಾರ್ಯತೆ ಬಂದಿರಬಹುದು. ಆದರೆ, ನಿಲ್ದಾಣದಲ್ಲಿ ಹೊಡೆದಿರುವ ಅಥವಾ ನಿಲ್ದಾಣವನ್ನು ಬಿಟ್ಟು ಹೋಗುವಂತೆ ಬಲ ಪ್ರಯೋಗ ಮಾಡಿರುವ ಯಾವುದೇ ಸಾಕ್ಷಿಗಳು ಇಲ್ಲ ಎಂದು ಅಧಿಕಾರಿಗಳು ನಡೆದಿದೆ.