ಅಕ್ಷಯ ಕಾಲೇಜು, ಮಂಗಳೂರು ಕೆರಿಯರ್ ಡೆಸ್ಟಿನಿಯಿಂದ ಪುತ್ತೂರಿನಲ್ಲಿ ಪ್ರಥಮವಾಗಿ ಏವಿಯೇಶನ್, ಸ್ಯಾಪ್, ಬ್ಯಾಟ್ ಕೋರ್ಸ್ ಉದ್ಘಾಟನೆ | ಪಿಯುಸಿ/ಪದವಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಲ್ಲ ಕೋರ್ಸ್ ಗಳು : ಜಯಂತ್ ನಡುಬೈಲು

ಪುತ್ತೂರು : ದರ್ಬೆಯಲ್ಲಿ ಕೇವಲ ಇಪ್ಪತ್ತು ವಿದ್ಯಾರ್ಥಿಗಳಿಂದ ಆರಂಭವಾದ ಗ್ಲೋರಿಯ ಕಾಲೇಜು ಆಫ್ ಫ್ಯಾಶನ್ ಡಿಸೈನಿಂಗ್ ಇದೀಗ ಸಂಪ್ಯದಲ್ಲಿ ಉದ್ಯಮಿ ಜಯಂತ್ ನಡುಬೈಲುರವರ ಮುಂದಾಳತ್ವದಲ್ಲಿ ಅಕ್ಷಯ ಕಾಲೇಜು ಎಂಬ ನಾಮಾಂಕಿತದೊಂದಿಗೆ ಸುಮಾರು ೪೫೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಇದೀಗ ದರ್ಬೆ ಬೈಪಾಸ್ ರಸ್ತೆಯ ಫಾ.ಪತ್ರಾವೋ ಸರ್ಕಲ್ ಬಳಿಯ ಆರಾಧ್ಯ ಆರ್ಕೇಡ್‌ನ ಮೂರನೇ ಮಹಡಿಯಲ್ಲಿ ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಅಕ್ಷಯ ಕಾಲೇಜು ಹಾಗೂ ಕೆರಿಯರ್ ಡೆಸ್ಟಿನಿ ಮಂಗಳೂರು ಜಂಟಿ ಸಹಯೋಗದಲ್ಲಿ `ಅಕ್ಷಯ ಕೆರಿಯರ್ ಅಕಾಡೆಮಿ’ ಸಂಸ್ಥೆಯನ್ನು ಸ್ಥಾಪಿಸಿ ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಏವಿಯೇಶನ್, ಸ್ಯಾಪ್, ಬ್ಯಾಟ್ ಅಲ್ಪಾವಧಿ ಕೋರ್ಸ್ ಗಳನ್ನು ಹುಟ್ಟು ಹಾಕಿದ್ದು ಫೆ.೧೪ ರಂದು ಲೋಕಾರ್ಪಣೆಗೊಂಡಿದೆ.

ಪಿಯುಸಿ/ಪದವಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬಲ್ಲ ಕೋರ್ಸ್ ಗಳು-ಜಯಂತ್ ನಡುಬೈಲು :

ಅಕ್ಷಯ ಕಾಲೇಜಿನ ಚೇರ್‌ಮ್ಯಾನ್ ಜಯಂತ್ ನಡುಬೈಲುರವರು ನೂತನ ಶಾಖೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ರೂಪುವಿಕೆಗೋಸ್ಕರ ಉದ್ಯೋಗಪೂರಕ ವೃತ್ತಿಪರ ಕೋರ್ಸ್ ಗಳನ್ನು ಮಂಗಳೂರು ವಿ.ವಿಯೊಡನೆ ಸಂಯೋಜನೆಯೊಂದಿಗೆ ೨೦೧೯ರಲ್ಲಿ ಅಕ್ಷಯ ಎಜ್ಯುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಈಗಾಗಲೇ ಪ್ರಾರಂಭಿಸಿದ್ದೇವೆ. ಪ್ರಥಮವಾಗಿ ಬಿಎಸ್ಸಿ ಫ್ಯಾಶನ್ ಡಿಸೈನಿಂಗ್, ಇಂಟೀರಿಯರ್ ಡಿಸೈನಿಂಗ್, ಬಿಕಾಂ ವಿಥ್ ಏವಿಯೇಶನ್ ಆ್ಯಂಡ್ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಬಿಸಿಎ ಆರ್ಟಿಫಿಶಿಯಲ್ ಸೈಬರ್ ಆ್ಯಂಡ್ ಡಾಟಾ ಅನಲೈಸ್, ಬಿಎಚ್‌ಸಿ ಹೊಟೇಲ್ ಮ್ಯಾನೇಜ್ ಮೆಂಟ್ ಮತ್ತು ಬಿಎ ಪದವಿ ಶಿಕ್ಷಣದೊಂದಿಗೆ ಸರ್ಟಿಫಿಕೇಟ್ ಕೋರ್ಸ್ಗಳನ್ನು ಆರಂಭಿಸಿದ್ದೇವೆ ಎಂದರು. ಏವಿಯೇಶನ್ ಶಿಕ್ಷಣವನ್ನು ಪ್ರಥಮ ಬಾರಿಗೆ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳಿಗೆ ಸಹಾಯವಾಗಲೆಂದು ಈ ಭಾಗದಲ್ಲಿ ಆರಂಭಿಸಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಪಾವಧಿ ಕೋರ್ಸ್ಗಳಾದ ಏವಿಯೇಶನ್ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್, ಲಾಜಿಸ್ಟಿಕ್, ಸ್ಯಾಪ್, ಬ್ಯಾಟ್ ಹೀಗೆ ಬೇರೆ ಬೇರೆ ಕೋರ್ಸ್ಗಳು ಕಡಿಮೆ ಶುಲ್ಕದಲ್ಲಿ ಪದವಿ ಅಥವಾ ಪಿಯುಸಿ ಬಳಿಕ ಮಾಡಬಹುದಾಗಿದ ಎಂದು ಅವರು ಹೇಳಿದರು.

































 
 

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪುತ್ತೂರಿನಲ್ಲಿ ಏವಿಯೇಶನ್ ಶಿಕ್ಷಣ ಆರಂಭ : ಜಯಶ್ರೀ

ಮಂಗಳೂರು ಕೆರಿಯರ್ ಡೆಸ್ಟಿನಿ ಇದರ ಮುಖ್ಯಸ್ಥೆ ಜಯಶ್ರೀ ಮಾತನಾಡಿ, ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆಯಿಂದ ಬಂದು ಇಲ್ಲಿನ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏವಿಯೇಶನ್ ಶಿಕ್ಷಣವನ್ನು ೨೦೨೧ರಿಂದಲೇ ಪ್ರಾರಂಭಿಸಿದ್ದು, ಈ ಬ್ಯಾಚಿನ ವಿದ್ಯಾರ್ಥಿಗಳು ಇದೀಗ ಮಂಗಳೂರಿನ ಏರ್ ಪೋರ್ಟ್‍ ನಲ್ಲಿ, ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪದವಿ ನಂತರ ಪ್ರೊಫೆಶನಲ್ ಕೋರ್ಸ್ ಕಲಿಯುವುದು ಹೇಗೆ?, ಕೆಲವರಿಗೆ ಮೂರು ತಿಂಗಳ ಶಿಕ್ಷಣ, ಆರು ತಿಂಗಳ ಶಿಕ್ಷಣ ಹೀಗೆ ಅಭಿಪ್ರಾಯಗಳು ಬಂದಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೀಗಾಗಿ ಪ್ರೊಫೆಶನಲ್ ಕೋರ್ಸ್ ಪುತ್ತೂರಿನಲ್ಲಿ ಕೆರಿಯರ್ ಡೆಸ್ಟಿನಿ ಹಾಗೂ ಅಕ್ಷಯ ಕಾಲೇಜು ಸಹಯೋಗದಲ್ಲಿ ಇದೀಗ ಉದ್ಘಾಟನೆಗೊಂಡಿದೆ. ಪಿಯುಸಿ ಆದವರಿಗೆ ಒಂದು ವರ್ಷ ಹಾಗೂ ಪದವಿ ಆದವರಿಗೆ ಆರು ತಿಂಗಳ ಈ ಏವಿಯೇಶನ್ ಕೋರ್ಸ ನ್ನು ಮಾಡಬಹುದಾಗಿದೆ ಎಂದರು.

ಏವಿಯೇಶನ್ ಶಿಕ್ಷಣದಲ್ಲಿ ಬ್ಯೂಟಿ ಇಂಡಸ್ಟಿçÃಯೂ ಪ್ರಮುಖ ಪಾತ್ರ ವಹಿಸುತ್ತದೆ : ಮರ್ಸಿ ವೀನಾ ಡಿ’ಸೋಜ

ಮಂಗಳೂರಿನ ಮರ್ಸಿ ಬ್ಯೂಟಿ ಸಲೂನ್ ಆ್ಯಂಡ್ ಅಕಾಡೆಮಿಯ ಮರ್ಸಿ ವೀನಾ ಡಿ’ಸೋಜರವರು ಸುಸಜ್ಜಿತ ತರಗತಿ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ಏವಿಯೇಶನ್ ಶಿಕ್ಷಣ ಎಂಬುದು ಥಿಯರಿ ಹಾಗೂ ಪ್ರಾಕ್ಟಿಕಲ್‍ ಎರಡನ್ನೂ ಒಳಗೊಂಡಿದೆ. ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆಯು ಪುತ್ತೂರಿನ ಅಕ್ಷಯ ಕಾಲೇಜಿನೊಂದಿಗೆ ಸಂಯೋಜನೆಗೊಂಡು ಈ ಭಾಗದ ವಿದ್ಯಾರ್ಥಿಗಳಿಗೆ ಏವಿಯೇಶನ್ ಕೋರ್ಸ್ ಗಳ ಬಗ್ಗೆ ಶಿಕ್ಷಣವನ್ನು ಧಾರೆಯೆರೆಯುತ್ತಿರುವುದು ಒಳ್ಳೆಯ ವಿಷಯವಾಗಿದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಈ ಏವಿಯೇಶನ್ ಇಂಡಸ್ಟಿçಯು ಬಹಳ ಪ್ರಾಮುಖ್ಯತೆ ಪಡೆದಿದ್ದು ಇದರಲ್ಲಿ ಬ್ಯೂಟಿ ಇಂಡಸ್ಟ್ರೀಯ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ನಾನೊಂದು ಸಂಸ್ಥೆಯನ್ನು ಮುನ್ನೆಡೆಸುತ್ತಿದ್ದು ನನ್ನನ್ನು ಈ ಅಕ್ಷಯ ಸಂಸ್ಥೆಯೊಂದಿಗೆ ಸೇರಿಸಿಕೊಂಡು ತನ್ನಲ್ಲಿನ ಜ್ಞಾನಧಾರೆಯನ್ನು ಭವಿಷ್ಯದ ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದಕ್ಕೆ ಬಹಳ ಖುಶಿಯಾಗುತ್ತಿದೆ ಎಂದರು.

ಏವಿಯೇಶನ್ ಅಲ್ಪಾವಧಿ ಶಿಕ್ಷಣದೊಂದಿಗೆ ಒಳ್ಳೆಯ ಉದ್ಯೋಗವನ್ನು ಪಡೆಯಬಹುದು : ದೇವಿಪ್ರಸಾದ್

ಝೂಂಬಾ ಆಫ್ ಸ್ಟ್ರಾಂಗ್‍ ನೇಷನ್, ಸರ್ಟಿಫೈಡ್ ಫಿಟ್ನೆಸ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರ ದೇವಿಪ್ರಸಾದ್ ಮಾತನಾಡಿ, ಅಕ್ಷಯ ಕಾಲೇಜು ಹಾಗೂ ಡೆಸ್ಟಿನಿ ಕೆರಿಯರ್ ಮಂಗಳೂರು ಇವರ ಸಂಯೋಜನೆಯಲ್ಲಿ ಈ ಭಾಗದಲ್ಲಿ ಆರಂಭಿಸಲಾದ ಏವಿಯೇಶನ್ ಅಲ್ಪಾವಧಿ ಕೋರ್ಸ್ ಗಳು ಇಲ್ಲಿನ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನಕಾರಿ. ಪ್ರಸ್ತುತ ದಿನಗಳಲ್ಲಿ ಏರ್ ಇಂಡಿಯಾ, ಇಂಡಿಗೋ ಸಂಸ್ಥೆಯು ಸರಾಸರಿ ೫೦೦ರಂತೆ ವಿಮಾನಗಳನ್ನು ಖರೀದಿಸುತ್ತಿದೆ ಮಾತ್ರವಲ್ಲ ಇದು ಪ್ರತೀ ವರ್ಷವೂ ಚಾಲ್ತಿಯಲ್ಲಿದ್ದು ಅನೇಕ ಉದ್ಯೋಗವಕಾಶಗಳನ್ನು ಸೃಷ್ಟಿಸುತ್ತಿದೆ. ಆದರೆ ಗ್ರಾಮಾಂತರ ಪ್ರದೇಶದವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದ ಅವರು ಏವಿಯೇಶನ್ ಶಿಕ್ಷಣದಲ್ಲಿ ನಮ್ಮ ಬಾಡಿ ಲ್ಯಾಂಗ್ವೇಜ್, ಹೇಗೆ ಡ್ರೆಸ್ ಧರಿಸಬೇಕು, ಹೇಗೆ ಕಾಣಬೇಕು ಎನ್ನುವುದು ಅಡಕವಾಗಿರುತ್ತದೆ. ಏವಿಯೇಶನ್ ಶಿಕ್ಷಣವು ಅಲ್ಪಾವಧಿ ಶಿಕ್ಷಣವನ್ನು ಪಡೆದು ಒಳ್ಳೆಯ ಉದ್ಯೋಗವನ್ನು ಪಡೆಯಬಹುದಾಗಿದೆ ಎಂದರು.

ವೃತ್ತಿಪರ ಶಿಕ್ಷಣದಲ್ಲಿ ಅಕ್ಷಯ ಕಾಲೇಜು ಮುಂದು : ಸಂಪತ್ ಪಕ್ಕಳ

ಅಕ್ಷಯ ಕಾಲೇಜು ಪ್ರಾಂಶುಪಾಲ ಸಂಪತ್ ಕೆ.ಪಕ್ಕಳ ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಆರಂಭಿಸಿದ ಅಕ್ಷಯ ಕಾಲೇಜು ವೃತ್ತಿಪರ ಶಿಕ್ಷಣದಲ್ಲಿ ದಾಪುಗಾಲಿಟ್ಟಿರುವುದು ಶ್ಲಾಘನೀಯ. ಸಾಂಪ್ರದಾಯಿಕ ಬಿಎ ಕೋರ್ಸ್ ನೊಂದಿಗೆ ಆರು ಪ್ರೊಫೆಶನಲ್ ಕೋರ್ಸ್ ಗಳಿದ್ದು, ಪುತ್ತೂರು ಹಾಗೂ ಸುತ್ತಮುತ್ತಲೂ ಏವಿಯೇಶನ್ ಕೋರ್ಸ ನ್ನು ಪ್ರಥಮ ಬಾರಿಗೆ ಪರಿಚಯಿಸಿದ್ದು ಅಕ್ಷಯ ಕಾಲೇಜು. ೨೦೨೧ರಲ್ಲಿ ಬಿಕಾಂ ಪದವಿಯೊಂದಿಗೆ ಏವಿಯೇಶನ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟನ್ನು ಕೆರಿಯರ್ ಡೆಸ್ಟಿನಿ ಮಂಗಳೂರು ಇವರ ಸಂಯೋಜನೆಯೊಂದಿಗೆ ಆರಂಭಿಸಿರುತ್ತೇವೆ. ಇದೀಗ ಬಿಕಾಂ ಪದವಿ ಮಾತ್ರವಲ್ಲದೆ ಬಿಎಸ್ಸಿ ಫ್ಯಾಷನ್ ಡಿಸೈನಿಂಗ್, ಬಿಎಸ್ಸಿ ಇಂಟೀರಿಯರ್ ಡಿಸೈನ್ ಆ್ಯಂಡ್ ಡೆಕೋರೇಶನ್, ಬಿಕಾಂ, ಬಿಸಿಎ, ಹಾಸ್ಪಿಟಾಲಿಟಿ ಸೈನ್ಸ್ ಹೊಟೇಲ್ ಮ್ಯಾನೇಜ್ಮೆಂಟ್, ಬಿಎ ವಿದ್ಯಾರ್ಥಿಗಳಿಗೆ ಪದವಿ ವಿದ್ಯಾಭ್ಯಾಸದೊಡನೆ ಏವಿಯೇಶನ್ ಶಿಕ್ಷಣ ಪಡೆದುಕೊಳ್ಳುವ ಅವಕಾಶ ಸಂಸ್ಥೆ ಮಾಡಿಕೊಟ್ಟಿದೆ ಎಂದರು.

ಕಳೆದ ಮೂರು ವರ್ಷದಿಂದಲೇ ಏವಿಯೇಶನ್ ಕೋರ್ಸ್ ಆರಂಭಿಸಿದೆ : ಅರ್ಪಿತ್ ಟಿ.ಎ

ಅಕ್ಷಯ ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಮಾತನಾಡಿ, ಕೊಡಗು ಹಾಗೂ ಪುತ್ತೂರು ತಾಲೂಕಿನ ಪರಿಸರದಲ್ಲಿ ಮಾರ್ಕೆಟಿಂಗ್ ಮಾಡುವ ಸಂದರ್ಭದಲ್ಲಿ ಏವಿಯೇಶನ್ ಶಿಕ್ಷಣದ ಬಗ್ಗೆ ಸಾಕಷ್ಟು ಮಂದಿ ವಿಚಾರಿಸಿದ್ದಾಗಿದೆ. ಏವಿಯೇಶನ್ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳು ಮಂಗಳೂರು ಅಥವಾ ಬೆಂಗಳೂರನ್ನು ಆಶ್ರಯಿಸಬೇಕಿತ್ತು ಮಾತ್ರವಲ್ಲ ಇದು ಖರ್ಚುವೆಚ್ಚದಾಯಕವಾಗಿತ್ತು ಎಂದ ಅವರು ಕಳೆದ ಮೂರು ವರ್ಷಗಳ ಹಿಂದೆ ಅಕ್ಷಯ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸದೊಂದಿಗೆ ಏವಿಯೇಶನ್ ಕೋರ್ಸ್ ಅನ್ನು ಪರಿಚಯಿಸಿದ್ದು ಪ್ರಸ್ತುತ ಬೆಂಗಳೂರಿನಲ್ಲಿ ಒಳ್ಳೆಯ ಹುದ್ದೆಯನ್ನು ಕಂಡುಕೊಂಡಿರುವುದು ಸಂತಸದ ವಿಷಯವಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಅಲ್ಪಾವಧಿಯ ಏವಿಯೇಶನ್ ಕೋರ್ಸ್, ಸ್ಯಾಪ್, ಬ್ಯಾಟ್ ಕೋರ್ಸ್ ಗಳನ್ನು ಪುತ್ತೂರಿನಲ್ಲಿ ಆರಂಭಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಪಿಯುಸಿ/ಪದವಿ ಬಳಿಕ ಮುಂದೇನು?..

ವಿದ್ಯಾರ್ಥಿಗಳು ಪಿಯುಸಿ ಅಥವಾ ಬಿಎಸ್ಸಿ, ಬಿಕಾಂ, ಬಿಎ ಹೀಗೆ ಮೂರು ವರ್ಷಗಳ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ತನ್ನ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಪೋಷಕರಿಗೆ ಚಿಂತೆ ಕಾಡುವುದು ಸಹಜ. ಉನ್ನತ ಹಾಗೂ ಪ್ರತಿಷ್ಠಿತ ಹುದ್ದೆಯಾದ ವಾಯುಯಾನ(ಏವಿಯೇಶನ್) ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಕೋರ್ಸ್ ಅನ್ನು ಪೂರೈಸಲು ಮಂಗಳೂರು ಹೀಗೆ ದೂರದ ಊರಿಗೆ ಪಯಣಿಸಬೇಕಿತ್ತು. ಇದೀಗ ಪುತ್ತೂರಿನ ಅಕ್ಷಯ ಕಾಲೇಜು ವಾಯುಯಾನ(ಏವಿಯೇಶನ್) ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಡಿಪ್ಲೋಮಾ ಕೋರ್ಸ್ ಅನ್ನು ಪುತ್ತೂರಿನಲ್ಲಿ ಪರಿಚಯಿಸಿದ್ದು ವಿದ್ಯಾರ್ಥಿಗಳ ಚಿಂತೆಯನ್ನು ದೂರ ಮಾಡಿದೆ.

ಈ ಸಂದರ್ಭದಲ್ಲಿ ಡಿಪ್ಲೋಮಾ ಇನ್ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಕೋರ್ಸ್ ನ ಲೋಗೊವನ್ನು ಅನಾವರಣಗೊಳಿಸಲಾಯಿತು. ಮಂಗಳೂರು ಕೆರಿಯರ್ ಡೆಸ್ಟಿನಿ ಎಚ್.ಆರ್ ಅಕ್ಷತಾ, ಯಾಮಿನಿ ಸಹಿತ ಹಲವರು ಉಪಸ್ಥಿತರಿದ್ದರು. ಪುತ್ತೂರು ಶಾಖೆಯ ಭರತ್ ಒತ್ಲಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಏರ್‌ಪೋರ್ಟ್ಸ್, ಏರ್‌ಲೈನ್ಸ್ ಗಳಲ್ಲಿ ಉದ್ಯೋಗ

ಅಕ್ಷಯ ಕಾಲೇಜಿನಲ್ಲಿ ಏವಿಯೇಶನ್ ಕೋರ್ಸ್ ಅನ್ನು ಸ್ಥಾಪಿಸಲಾಗಿದ್ದು ಇಲ್ಲಿ ಕಲಿತ ವಿದ್ಯಾರ್ಥಿಗಳು ಪ್ರತಿಷ್ಠಿತ ಏರ್‌ಪೋರ್ಟ್ಸ್ ಹಾಗೂ ಏರ್‌ಲೈನ್ಸ್ ಗಳಲ್ಲಿ ಈಗಾಗಲೇ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾಣ ನಿಲ್ದಾಣದ ಇಂಡಿಗೋ ಏರ್‌ಲೈನ್ಸ್ ಗಳಲ್ಲಿ ಗ್ರೌಂಡ್ ಸಿಬ್ಬಂದಿಯಾಗಿ ವರ್ಷಿಣಿ ಹಾಗೂ ಅರ್ಚನಾ, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾಣ ನಿಲ್ದಾಣದಲ್ಲಿ ಡ್ಯೂಟಿ ಫ್ರೀ ಸಿಬ್ಬಂದಿಯಾಗಿ ಯಾಶ್ಮಿತಾ, ಹಂಸಿಣಿ ಹಾಗೂ ಪ್ರಜ್ವಲ್, ಡ್ಯೂಟಿ ಫ್ರೀ-ಗ್ರೌಂಡ್ ಹ್ಯಾಂಡ್ಲಿಂಗ್ ಸಿಬ್ಬಂದಿಯಾಗಿ ಕೃತಿ, ಆಕಶಾ ಏರ್‌ಲೈನ್ಸ್ನಲ್ಲಿ ಅನುಪಮ, ಸ್ಪೆöಸ್ ಜೆಟ್ , ಏರ್‌ಲೈನ್ಸ್ ನಲ್ಲಿ ಭವಿಷ್ ಶೆಟ್ಟಿ, ಗೋವಾ ವಿಐಪಿ ಲಾಂಜ್‌ನಲ್ಲಿ ಲೆಸ್ಟರ್, ಚೆನ್ನೈ ಏರ್‌ಪೋರ್ಟ್ ನ ಇಂಡಿಗೋದಲ್ಲಿ ನುಶ್ರತ್‌ರವರು ಈಗಾಗಲೇ ನೇಮಕಾತಿ ಪಡೆದು ಉದ್ಯೋಗನಿರತರಾಗಿದ್ದಾರೆ.

ಭವಿಷ್ಯ ರೂಪಿಸಿಕೊಳ್ಳಿ

ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ರೂಪುಗೊಳಿಸಲು ಏವಿಯೇಶನ್ ಶಿಕ್ಷಣವನ್ನು ನಮ್ಮ ಅಕ್ಷಯ ಕಾಲೇಜು ನೀಡುತ್ತಿದ್ದೇವೆ. ಪಿಯುಸಿ ಹಾಗೂ ಪದವಿ ಬಳಿಕ ಅಲ್ಪಾವಧಿ ಕೋರ್ಸ್ ಅನ್ನು ವೈದಿಕ ಕಾರ್ಯದೊಂದಿಗೆ ಆರಂಭ ಮಾಡಿದ್ದು, ಈ ಕುರಿತಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಹಿತಿ ನೀಡುತ್ತಿದ್ದೇವೆ. ಪ್ರಥಮ ಬ್ಯಾಚಿನಲ್ಲಿ ವ್ಯಾಸಂಗ ಮಾಡಿದಂತಹ ೨೦ ಮಂದಿ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ತೆಗೆದುಕೊಳ್ಳದೆ ಉದ್ಯೋಗ ಸಿಕ್ಕಿದ ಬಳಿಕ ಅವರಿಂದ ಶುಲ್ಕವನ್ನು ಪಡೆದುಕೊಳ್ಳುವ ಇರಾದೆ ನಮ್ಮ ಸಂಸ್ಥೆಯದ್ದು. -ಜಯಂತ್ ನಡುಬೈಲು, ಚೇರ್‌ಮ್ಯಾನ್, ಅಕ್ಷಯ ಕಾಲೇಜು

ಸ್ಯಾಪ್, ಬ್ಯಾಟ್ ಏವಿಯೇಶನ್ ಕೋರ್ಸ್ ಗಳು

ಸಿಸ್ಟಮ್ಸ್, ಅಪ್ಲಿಕೇಶನ್, ಪ್ರಾಡಕ್ಟ್ (ಸ್ಯಾಪ್) ಆಡಿಟ್ ಎನ್ನುವುದು ಕಂಪ್ಯೂಟರ್ ಸಿಸ್ಟಮ್ಸ್ ನ ಸುರಕ್ಷತೆ ಮತ್ತು ಡೇಟಾ ಸಮಗ್ರತೆಯನ್ನು ಪರಿಶೀಲಿಸಲು ಸ್ಯಾಪ್‌ನಿಂದ ಆಡಿಟ್ ಆಗಿದೆ. ಈ ಸ್ಯಾಪ್ ಕೋರ್ಸ್ ನಡಿಯಲ್ಲಿ ಹಣಕಾಸು ಮತ್ತು ವೆಚ್ಚದಲ್ಲಿ ಪ್ರಮಾಣೀಕರಣ, ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಪ್ರಮಾಣೀಕರಣ, ವಸ್ತು ನಿರ್ವಹಣೆಯಲ್ಲಿ ಪ್ರಮಾಣೀಕರಣ, ವ್ಯಾಪಾರ ಲೆಕ್ಕಪತ್ರ ತೆರಿಗೆಯಲ್ಲಿ ಪ್ರಮಾಣೀಕರಣ, ಸುಧಾರಿತ ಮಟ್ಟದ ಕಂಪನಿ ಪ್ರಮಾಣೀಕರಣ, ಕೌಶಲ್ಯ ಆಧಾರಿತ ಅವಧಿಗಳೊಂದಿಗೆ ಕಾರ್ಪೊರೇಟ್ ತರಬೇತಿ, ಅಣಕು ಸಂದರ್ಶನಗಳು, ಕಾರ್ಪೊರೇಟ್ ಕೌಶಲ್ಯ ಸಿದ್ಧತೆಗಳು, ಉನ್ನತ ಮಟ್ಟದ ಪ್ರೋಗ್ರಾಮಿಂಗ್ ಭಾಷೆ ಕೋರ್ಸ್ ಗಳನ್ನು ಸಂಸ್ಥೆಯು ನೀಡುತ್ತಿದೆ. ಪ್ರತಿಷ್ಠಿತ ಏವಿಯೇಶನ್(ವಾಯುಯಾನ) ಕೋರ್ಸ್ ಗಳಲ್ಲಿ ವಾಯುಯಾನ ಮತ್ತು ಹಾಸ್ಪಿಟಾಲಿಟಿ ನಿರ್ವಹಣೆಯಲ್ಲಿ ಸುಧಾರಿತ ಡಿಪ್ಲೊಮಾ, ವಿಮಾನ ನಿಲ್ದಾಣ ನಿರ್ವಹಣೆಯಲ್ಲಿ ಸುಧಾರಿತ ಡಿಪ್ಲೊಮಾ, ಫ್ಲೆöಟ್ ಅಟೆಂಡೆöಟ್ ಮತ್ತು ಕ್ಯಾಬಿನ್ ಸಿಬ್ಬಂದಿ ಕೋರ್ಸ್ ಗಳನ್ನು ಹೊಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top