ಪುತ್ತೂರು: ಕಡಬ ತಾಲೂಕಿನ ಎಣ್ಮೂರು ಗ್ರಾಮದ ಹೇಮಳ ಕೂರಂಬೈಲು ಭುವನೇಶ್ವರಿ-ಬಾಲಕೃಷ್ಣ ಗೌಡರ ಪುತ್ರಿ ರಕ್ಷಿತಾ ಬಿ.ಕೆ. ಹಾಗೂ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಮಳುವೇಲು ಮನೆ ಯಶೋಧಾ-ಗಂಗಾಧರ ಗೌಡರ ಪುತ್ರ ದೀಕ್ಷಿತ್ ಎಂ.ಜಿ. ಭಾನುವಾರ ವೈವಾಹಿಕ ಜೀವನ ಪ್ರವೇಶಿಸಿದರು.
ಪುತ್ತೂರಿನ ತೆಂಕಿಲ ಬೈಪಾಸ್ ಬಳಿ ಇರುವ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ವಿವಾಹ ಸಮಾರಂಭ ನಡೆಯಿತು.
ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು.