ವೀರಮಂಗಲ : ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಯವರ ಹಿರಿತನದಲ್ಲಿ ವರ್ಷಾವದಿ ವಿಷ್ಣುಮೂರ್ತಿ ದೇವರ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ಕಾರ್ಯಕ್ರಮ ಫೆ.15ರಂದು ನಡೆಯಲಿದೆ.
ಬೆಳಗ್ಗೆ 6ರಿಂದ ಗಣಪತಿ ಹೋಮ, ಸಿಯಾಳಭಿಷೇಕ, ಪವಮಾನಾಭಿಷೇಕ, ನವಕ ಕಲಶಾಭಿಷೇಕ ನಡೆಯಲಿದೆ. ಬೆಳಗ್ಗೆ 11ರಿಂದ ಶ್ರೀ ಲಕ್ಷ್ಮೀ ಪ್ರಿಯ ಭಜನಾ ಮಂಡಳಿ ಬೆಳಂದೂರು ಇವರಿಂದ ಭಜನಾ ಕಾರ್ಯಕ್ರಮ ನೆರವೇರಲಿದೆ. ಮದ್ಯಾಹ್ನ 12:30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ಸಂಜೆ 5 ಗಂಟೆಗೆ ದೈವಗಳ ಭಂಡಾರ ತೆಗೆಯುವುದು. ಸಂಜೆ 6ರಿಂದ ಶ್ರೀ ಮಹಾವಿಷ್ಣುಮೂರ್ತಿ ಭಜನಾ ಮಂಡಳಿ ವೀರಮಂಗಲ ಇವರಿಂದ ದಾಸ ಸಂಕೀರ್ತನೆ ನಡೆಯಲಿದೆ. ಸಂಜೆ 7ರಿಂದ ಕಾಳಿಕ ನಾಟ್ಯಾಲಯ ವೀರಮಂಗಲ, ಸವಣೂರು ಇವರಿಂದ , ವಿದುಷಿ ಸುಪ್ರಿಯಾ ಕಾರ್ತಿಕ್ ಶಗ್ರಿತ್ತಾಯ ವೀರಮಂಗಲರವರ ನಿರ್ದೇಶನದ ಭರತನಾಟ್ಯ ನಡೆಯಲಿದೆ. ಬಳಿಕ ರಾತ್ರಿ 9 ಗಂಟೆಗೆ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಲಿದೆ. ರಾತ್ರಿ 9:30ರಿಂದ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ 12 ಗಂಟೆಗೆ ಉಳ್ಳಾಕುಳು, ಕೊಡಮಣಿತ್ತಾಯ, ಹುಲಿಭೂತ, ಅಂಙಣ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಲಿದೆ.
ಬಳಿಕ ಫೆ.16ರಂದು ಬೆಳಗ್ಗೆ 7ರಿಂದ ಶ್ರೀ ರಕ್ತೇಶ್ವರಿ, ಶಿರಾಡಿ ರಾಜನ್ ದೈವ, ಗುಳಿಗ ದೈವಗಳ ನೇಮೋತ್ಸವ ಜರುಗಲಿದೆ. ಮದ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ. ಫೆ. 22 ಶನಿವಾರ ಭಂಡಾರ ತಗೆದು ಫೆ.23 ರಂದು ಭಾನುವಾರ ಬೆಳಗ್ಗಿನಿಂದ ವೀರಮಂಗಲ ಶ್ರೀ ಶಿರಾಡಿ ರಾಜನ್ ದೈವದ ದೊಂಪದ ಬಲಿ ನೇಮೋತ್ಸವ ಜರುಗಲಿದೆ.
ವೀರಮಂಗಲದಲ್ಲಿ ನಡೆಯುವ ವರ್ಷಾವಧಿ ಜಾತ್ರೆ ಹಾಗೂ ದೈವಗಳ ನೇಮೋತ್ಸವಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಪ್ರಸಾದ ಹಾಗೂ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿಶ್ವಸ್ಥ ಮಂಡಳಿ ಅಧ್ಯಕ್ಷ ಉಮೇಶ್ ಕೋಡಿಬೈಲು, ಉತ್ಸವ ಸಮಿತಿ ಅಧ್ಯಕ್ಷ ಶಿವರಾಮ ಭಟ್ ಬಾವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.