ವಿಟ್ಲ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಫೆಬ್ರವರಿ ತಿಂಗಳ ಕೇಂದ್ರ ಸಮಿತಿಯ ಸಭೆಯು ವಿಟ್ಲ ಮಂಗಿಲ ಪದವು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದಲ್ಲಿ ಜರಗಿತು.
ಡಾ. ವಾರಿಜಾ ನೀರ್ಬೈಲು ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯರ ಸೇವಾ ಪ್ರತಿಷ್ಠಾನದ ಕಾರ್ಯಕ್ರಮಗಳು ಉತ್ತಮವಾಗಿದ್ದು ತಾಲೂಕು ಘಟಕಗಳು ಹೆಚ್ಚು ಸಕ್ರಿಯವಾಗಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸಿದಾಗ ಪ್ರತಿಷ್ಠಾನದ ಕಾರ್ಯಕ್ರಮಗಳು ಪರಿಣಾಮಕಾರಿಯಾಗುವುದೆಂದು ತಿಳಿಸಿದರು .
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಮಾತನಾಡಿ ಗೋ ಸಂರಕ್ಷಣಾ ಅಭಿಯಾನಕ್ಕೆ ಹಿರಿಯರ ಸೇವಾ ಪ್ರತಿಷ್ಠಾನದ ಘಟಕಗಳು ಸಹಕರಿಸಬೇಕೆಂದು ತಿಳಿಸಿದರು.
ಪ್ರತಿಷ್ಠಾನದ ಪದಾಧಿಕಾರಿಗಳಾದ ಡಾ. ಬಿ. ಯನ್.ಮಹಾಲಿಂಗ ಭಟ್, ಪ್ರೊ.ರಾಜಮಣಿ ರಾಮಕುಂಜ, ಉದಯಶಂಕರ ರೈ ಪುಣಚ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಸದಾಶಿವ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಷ್ಠಾನದ ಖಜಾಂಜಿ ಕೃಷ್ಣಶರ್ಮ ಅನಾರು ಸ್ವಾಗತಿಸಿ ಶಿವಾನಂದ ವಿಟ್ಲ ವಂದಿಸಿದರು.