ಬೆಳ್ತಂಗಡಿ : ಡಿವೈಡರ್‌ಗೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ-ವೇಣೂರು ರಸ್ತೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸಮೀಪದ ಉಕ್ಕಿನಡ್ಕ ನಿವಾಸಿ ಪ್ರಶಾಂತ್ ಪೂಜಾರಿ ಮೃತ ಪಟ್ಟ ಯುವಕ ಎನ್ನಲಾಗಿದೆ.
ಪ್ರಶಾಂತ್ ಪೂಜಾರಿ ಗುರುವಾಯನಕೆರೆಯಿಂದ ವೇಣೂರು ಕಡೆಗೆ ಬೈಕ್ ಚಲಾಯಿಸಿಕೊಂಡು ಹೋಗಿದ್ದು, ವೇಣೂರು ರಸ್ತೆಯ ದ್ವಾರದಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರನ ತಲೆ ವಿದ್ಯುತ್ ಕಂಬಕ್ಕೆ ಬಡಿದು ತೀವ್ರ ಸ್ವರೂಪದ ಗಾಯಗೊಂಡು ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.
ಬೆಳ್ತಂಗಡಿ ಟ್ರಾಫಿಕ್ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯ ಜನರ ಸಹಕಾರದಿಂದ ಪ್ರಶಾಂತ್ ಪೂಜಾರಿಯ ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆ ರವಾನಿಸಿದರು. ಮಿತಿ ಮೀರಿದ ವೇಗದ ಚಾಲನೆ ಹಾಗೂ ಅಜಾಗ್ರತೆ ಮತ್ತು ನಿರ್ಲಕ್ಷ್ಯತನಕ್ಕೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ.