ಉಪ್ಪಿನಂಗಡಿ: ಪ್ರತಿಷ್ಟಿತ ಉಪ್ಪಿನಂಗಡಿ ಸಿ.ಎ.ಬ್ಯಾಂಕ್ ನ ಅಧ್ಯಕ್ಷರಾಗಿ ಸುನಿಲ್ ಕುಮಾರ್ ದಡ್ಡು ಹಾಗೂ ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಆಯ್ಕೆಯಾಗಿದ್ದಾರೆ.
ಫೆ.2 ರಂದು ಬ್ಯಾಂಕ್ ನ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಬಿಜೆಪಿ ಬೆಂಬಲಿತ ಸಹಕಾರಿ ಭಾರತಿಯ 11 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎಲ್ಲಾ 12 ಸ್ಥಾನಗಳು ಸಹಕಾರಿ ಭಾರತಿ ತೆಕ್ಕೆಗೆ ಬಿದ್ದಿತ್ತು.
ಫೆ.11 ರಂದು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಸುನಿಲ್ ಕುಮಾರ್ ದಡ್ಡು, ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಅವರನ್ನು ಆಯ್ಕೆ ಮಾಡಲಾಯಿತು.