ಯಕ್ಷಭಾರತಿ ದಶಮಾನೋತ್ಸವ: ಭಾರತ ಮಾತಾಪೂಜನ, “ದಶಪರ್ವ ಸ್ಮರಣ ಸಂಚಿಕೆ” ಬಿಡುಗಡೆ

ಬೆಳ್ತಂಗಡಿ : ಯಕ್ಷ ಭಾರತಿ ರಿ.ಬೆಳ್ತಂಗಡಿ ಇದರ ದಶವರ್ಷದ ಪ್ರಯುಕ್ತ ಉಜಿರೆ  ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಭಾರತ ಮಾತಾ ಪೂಜನ  ಕಾರ್ಯಕ್ರಮವು ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯರ ಅಧ್ಯಕ್ಷತೆಯಲ್ಲಿ ಜರುಗಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಗಳೂರು ಸಂಸದ ಕ್ಯಾ. ಬ್ರಿಜೇಶ್ ಚೌಟ ದಶಪರ್ವ ಸಂಚಿಕೆ ಬಿಡುಗಡೆಗೊಳಿಸಿ ಯಕ್ಷಗಾನದೊಂದಿಗೆ ಸಂಸ್ಕಾರ ಶಿಕ್ಸಣ ಮತ್ತು ಅರೋಗ್ಯ ಸೇವಾಕಾರ್ಯಗಳನ್ನು ಯಕ್ಷ ಭಾರತಿ ನಡೆಸಿರುವುದು ಅಪೂರ್ವವಾಗಿದೆ. ಉಳಿದ ಸಂಘ ಸಂಸ್ಥೆಗಳಿಗೆ ಮಾದರಿಯಾಗಿರುವ ಯಕ್ಷಭಾರತಿ ಸಂಸ್ಥೆಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ತಿಳಿಸಿದರು.

ವಿಧಾನಪರಿಷತ್ ಶಾಸಕರಾದ ಕೆ. ಪ್ರತಾಪ ಸಿಂಹ ನಾಯಕ್ ಮಾತನಾಡಿ, ಯಕ್ಷ ಭಾರತಿ ಸದಸ್ಯನ ರೀತಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದಿರುವುದು ನನಗೆ ಸಂತಸವನ್ನು ತಂದಿದೆ ಎಂದರು.

































 
 

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ರಿ. ಬೆಳ್ತಂಗಡಿ ಅಧ್ಯಕ್ಷರಾದ ಸಂಪತ್ ಸುವರ್ಣ ಮಾತನಾಡಿ, ಅರ್ಥಪೂರ್ಣವಾದ ಕಾರ್ಯಕ್ರಮ ನಡೆಸುತ್ತಿರುವ ಸಂಸ್ಥೆಗೆ ಶುಭಹಾರೈಸಿದರು.

ಸೂರ್ಯನಾರಾಯಣ ರಾವ್ ಟ್ರಸ್ಟ್ ದೊಂಡೋಲೆ ಧರ್ಮಸ್ಥಳ ಇದರ ಅಧ್ಯಕ್ಷ ಪುರಂದರ ರಾವ್ ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಯಕ್ಷ ಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಬಿ. ಭುಜಬಲಿ ಧರ್ಮಸ್ಥಳ, ಶ್ರೀನಿವಾಸರಾವ್ ಧರ್ಮಸ್ಥಳ, ಪದಾಧಿಕಾರಿ ಹರಿದಾಸ ಗಾಂಭೀರ ಧರ್ಮಸ್ಥಳ, ಸಂಚಾಲಕ ಮಹೇಶ್ ಕನ್ಯಾಡಿ,  ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಸುರೇಶ ಕುದ್ರೆತ್ತಾಯ, ಶಶಿಧರ ಕನ್ಯಾಡಿ, ಕುಸುಮಾಕರ ಕುತ್ತೋಡಿ, ಹರೀಶ ಕೊಳ್ತಿಗೆ, ಕೆ. ವಿ ಸುದರ್ಶನ್, ಕೌಶಿಕ್ ರಾವ್, ಯಶೋಧರ ಇಂದ್ರ ಉಪಸ್ಥಿತರಿದ್ದರು.

 ಶ್ರೀನಿವಾಸ ರಾವ್ ಕಲ್ಮಂಜ, ಶಿವಪ್ರಸಾದ್  ಸುರ್ಯ ಭಾರತ ಮಾತಾ ಪೂಜನ ನಿರ್ವಹಿಸಿದರು ಯಕ್ಷಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಪ್ರಸ್ತಾವನೆಯೊಂದಿಗೆ ದಶಪರ್ವ  ಸಂಚಿಕೆಯ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರಾವ್ ಪ್ರಾರ್ಥಿಸಿದರು. ದಶಮಾನೋತ್ಸವ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ಬಳೆಂಜ ಸ್ವಾಗತಿಸಿ, ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೊಡು ವಂದಿಸಿದರು. ಭವ್ಯ ಹೊಳ್ಳ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top