ಪುತ್ತೂರು: ನೆಹರು ನಗರ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವದ ವಾರ್ಷಿಕ ಜಾತ್ರೋತ್ಸವ ಫೆ. 11ರಂದು ನಡೆಯಿತು.
ಬೆಳಗ್ಗೆ ಕಾರ್ಜಾಲು ಗುತ್ತಿನಲ್ಲಿ ಸ್ಥಳ ಶುದ್ಧಿ ಹೋಮ ಮತ್ತು ಕಲಶ ಪ್ರತಿಷ್ಠೆ ನಡೆಯಿತು. ಬೆಳಗ್ಗೆ11-30ಕ್ಕೆ ಕಲ್ಲೇಗ ದೈವಸ್ಥಾನದಲ್ಲಿ ಗಣಹೋಮ ಹಾಗೂ ಶ್ರೀ ದೈವಗಳ ತಂಬಿಲ ಮತ್ತು ನಾಗತಂಬಿಲ, ಮಧ್ಯಾಹ್ನ 12.30 ರಿಂದ ಕಲ್ಲೇಗ ದೈವಸ್ಥಾನದಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ನೆರವೇರಿತು.
ರಾತ್ರಿ ಗಂಟೆ 7.30ಕ್ಕೆ ಸರಿಯಾಗಿ ಶ್ರೀದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರ ಹೊರಡಲಿದ್ದು. ರಾತ್ರಿ ಗಂಟೆ 9:30ಕ್ಕೆ ಗೊಂದೊಳು ಪೂಜೆ, ರಾತ್ರಿ, 12 ಗಂಟೆಗೆ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ ನಡೆಯಲಿದೆ.
ಮಹಾಮ್ಮಾಯಿ – ಕಲ್ಲುರ್ಟಿ ಗುಡಿಗೆ ತಾಮ್ರದ ಹೊದಿಕೆ:
ಶ್ರೀ ಕಲ್ಕುಡ ದೈವಸ್ಥಾನದ ಎರಡನೇ ಹಂತದ ಜೀರ್ಣೋದ್ದಾರದ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳು ಯಶಸ್ವಿಯಾಗಿದ್ದು, ಮೂರನೇಯ ಹಂತದ ಕಾರ್ಯ ಯೋಜನೆಯನ್ನು 2024ರಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಭಕ್ತಾಭಿಮಾನಿಗಳ ಅಪೇಕ್ಷೆಯಂತೆ ಅಂದಾಜು 20 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಮಹಾಮಾಯಿ ದೈವದ ಗುಡಿ ಮತ್ತು ಶ್ರೀ ಕಲ್ಲುರ್ಟಿ ದೈವದ ಗುಡಿ ಮೇಲ್ಛಾವಣಿಗೆ ತಾಮ್ರದ ಹೊದಿಕೆ ಮಾಡುವ ಹಾಗೂ ಇತರ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಭಕ್ತಾದಿಗಳು ತನು ಮನ ಧನಗಳಿಂದ ಸಹಕರಿಸಬೇಕೆಂದು ವಿನಂತಿಸಲಾಗಿದೆ.