ವಿಟ್ಲ : ಭ/ಶ್ರೀ1008 ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ/1008 ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಶ್ರೀ ಯಕ್ಷಿ ಪದ್ಮಾವತಿ ಅಮ್ಮನವರ ಮತ್ತು ಶ್ರೀ ಯಕ್ಷಿ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು ಫೆ.13ರಿಂದ ಫೆ.17ರವರೆಗೆ ಮೆಗಿನಪೇಟೆ ಜೈನ ಬಸದಿಯಲ್ಲಿ ನಡೆಯಲಿದೆ.
ಇದಕ್ಕೆ ಪೂರಕವಾಗಿ ಭಗವಾನ್ ಚಂದ್ರನಾಥಸ್ವಾಮಿ ನೂತನ ಬಿಂಬವನ್ನು ಆರ್ಕುಳ ದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ, ಇದರ ಕೆದಿಲ ಹಾಗೂ ವಿಟ್ಲ ಶೌರ್ಯ ವಿಪತ್ತು ನಿರ್ವಹಣಾ ಘಟಕ ತಂಡ ಸದಸ್ಯರು ಕಾರ್ಯಕ್ರಮದ ಪೂರ್ವ ತಯಾರಿಯಾಗಿ ಶ್ರಮದಾನವನ್ನು ಮಾಡಿದರು.
ಈ ವೇಳೆ ಮುಖ್ಯಸ್ಥ ಪುಷ್ಪರಾಜ್ ಜೈನ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ, ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಯೋಜನಾಧಿಕಾರಿ ರಮೇಶ್, ಕೃಷಿ ಅಧಿಕಾರಿ ಚಿದಾನಂದ ಹಾಗು ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕೆದಿಲದ ಸದಸ್ಯರಾದ ಜಗದೀಶ, ಶೀನಪ್ಪ ವೆಂಕಪ್ಪ, ಗಿರೀಶ ಹಾಗೂ ಪೆರ್ಲಾಪು ತಾರಾನಾಥ ಮತ್ತು ವಿಟ್ಲ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯರಾದ ಕೆ.ವಸಂತ ಗೌಡ ಭಾಗವಹಿಸಿದ್ದರು.