ಪುತ್ತೂರು : ಆನಡ್ಕದಿಂದ ಪುತ್ತೂರಿಗೆ ಹಲವು ಸಮಯಗಳಿಂದ ಬಾರದೆ ಇದ್ದ ಬಸ್ಸಿನ ಸಂಚಾರವನ್ನು ಗ್ರಾಮಸ್ಥರ ಪ್ರತಿಭಟನೆಯ ಎಚ್ಚರಿಕೆಗೆ ಮಣಿದು ಆರಂಭಗೊಳಿಸಿದರಾದರೂ ಇದೀಗ ಮತ್ತೆ ಬಸ್ ಸಂಚಾರ ಸ್ಥಗಿತಗೊಂಡಿರುವ ಬಗೆ ಪ್ರಯಾಣಿಕರು ದಿಗ್ಭ್ರಮೆ ವ್ಯಕ್ತ ಪಡಿಸಿದ್ದು, ಪ್ರತಿಭಟನೆಗೆ ಸಿದ್ದತೆ ನಡೆಯುತ್ತಿದೆ ಎಂದು ಕೇಳಿಬಂದಿದೆ.
ಆನಡ್ಕ – ಪುತ್ತೂರು ಭಾಗಕ್ಕೆ ಬೆಳಗ್ಗೆ 8:00 ಗಂಟೆಗೆ ಹೊರಡುವ ಬಸ್ ಇಲ್ಲ ಎಂಬ ಮಾಹಿತಿ ಒಂದು ವಾರದ ಹಿಂದೆ ಕೇಳಿದ್ದೇವೆ. ಇದರಿಂದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ತೆರಳಲು ಸಮಸ್ಯೆಗಳಾಗಿವೆ. ಈ ಕಾರಣ ಬಸ್ ಹಾಕಲೇ ಬೇಕು ಇಲ್ಲದಿದ್ದಲ್ಲಿ ಸಾರ್ವಜನಿಕರು ಸೇರಿ ಪ್ರತಿಭಟನೆಯನ್ನು ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದ್ದರು. ಆ ಸಂದರ್ಭಕ್ಕೆ ಪ್ರತಿಭಟನೆಯ ಎಚ್ಚರಿಕೆಗೆ ಮಣಿದು ಸಂಚಾರ ಆರಂಭಗೊಂಡು ಪ್ರಯಾಣಿಕರು ಖುಷಿಯಾಗಿದ್ದರು.
ಇದೀಗ ಮತ್ತೆ ಬಸ್ ಸಂಚಾರದ ಕಣ್ಣುಮುಚ್ಚಾಲೆ ಆರಂಭಗೊಂಡಿದ್ದು, ಸಮರ್ಪಕ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಬಗ್ಗೆ ಆಕ್ರೋಶಿತರಾದ ಪ್ರಯಾಣಿಕರು ಮತ್ತೆ ರಸ್ತೆ ತಡೆಮಾಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ, ಆ ಮೂಲಕ ಸುಗಮ ಸಂಚಾರ ವ್ಯವಸ್ಥೆಯನ್ನು ಮಾಡಿಕೊಡುವವರೆಗೆ ಹೋರಾಟ ನಡೆಸಲು ನಿರ್ಧರಿಸಿದ್ದಾರೆ
.