ಕಾವೂರು, ಫೆ. 9: ಸಂತೃಪ್ತ ಗ್ರಾಹಕರನ್ನು ಹೊಂದಿರುವ ಮಂಗಳೂರಿನ ಕೊಟ್ಟಾರ ಚೌಕಿಯ ‘ವಿ ಗ್ರೂಪ್’ ಅಸೋಸಿಯೇಟ್ ಕಾವೂರಿನ ಗೊಲ್ಲರಬೆಟ್ಟು ಪ್ರಕೃತಿ ರಮಣೀಯ ಪರಿಸರದಲ್ಲಿ 2 ಬಿಎಚ್‌ಕೆ ಮತ್ತು 3 ಬಿಎಚ್‌ಕೆಯ 15 ಮನೆಗಳನ್ನು ನಿರ್ಮಿಸಿದ್ದು, ಕೇವಲ 60ರಿಂದ 80 ಲಕ್ಷ ರೂ.ಗಳಿಗೆ ಲಭ್ಯವಿವೆ.
ನಗರದ ಎಲ್ಲ ಅನುಕೂಲಗಳು ಇರುವ ಈ ವಸತಿ ಪ್ರದೇಶಕ್ಕೆ ಬಹು ಹತ್ತಿರದಲ್ಲಿಯೇ ಹೆಸರಾಂತ ಶಾಲಾ ಕಾಲೇಜುಗಳು, ಮೆಡಿಕಲ್ ಕಾಲೇಜು ಆಸ್ಪತ್ರೆ ಇರುವುದರಿಂದ ಗ್ರಾಹಕರು ಇಲ್ಲಿ ನಿರ್ಮಾಣಗೊಂಡಿರುವ ಮನೆಗಳನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಇಲ್ಲಿಗೆ 1 ರಿಂದ 2 ಕಿ.ಮೀ. ಅಂತರದಲ್ಲಿ ಪೊದಾರ್ ಸ್ಕೂಲ್, ಚೈತನ್ಯ ಸ್ಕೂಲ್, ತೃಷಾ ಕಾಲೇಜು, ಸಿಎಫ್ ಎಎಲ್ ಸ್ಕೂಲ್, ಸ್ವಿಮ್ಮಿಂಗ್ ಪೂಲ್, ಬ್ಯಾಡ್ಮಿಂಟನ್ ಕ್ಲಬ್, ಟೇಬಲ್ ಟೆನ್ನಿಸ್ ಕ್ಲಬ್, 3 ಕಿ.ಮೀ. ದೂರದಲ್ಲಿ ಎ.ಜೆ. ಮೆಡಿಕಲ್ ಕಾಲೇಜು ಆಸ್ಪತ್ರೆ, ໖.. ಎಂಜಿನಿಯರಿಂಗ್ ಕಾಲೇಜು, 5 ಕಿ.ಮೀ. ದೂರದಲ್ಲಿ ವಿಮಾನ ನಿಲ್ದಾಣವಿದೆ. ಖರೀದಿಸುವವರಿಗೆ ಬ್ಯಾಂಕ್ ಸಾಲದ ಮನೆಗಳನ್ನು ಅಗತ್ಯವಿದ್ದರೆ ವ್ಯವಸ್ಥೆಯನ್ನು ಸಂಸ್ಥೆಯ ವತಿಯಿಂದಲೇ ಮಾಡಿಕೊಡುವ ಸೌಲಭ್ಯವಿದೆ. ಹಲವು ವರ್ಷಗಳಿಂದ ಹೊಸದಾಗಿ ಮನೆಗಳನ್ನು ನಿರ್ಮಿಸಿ ಮಾರಾಟ ಮಾಡುವುದು, ಲೇಔಟ್ ಗಳ ನಿರ್ಮಾಣ ಮತ್ತು ಮನೆ ಸೈಟ್ ಗಳ ಮಾರಾಟ, ಪ್ರಾಪರ್ಟಿ ಡೆವಲಪಿಂಗ್‌ನಲ್ಲಿ ಪರಿಣತಿ ಪಡೆದಿರುವ ಸಂಸ್ಥೆಯು ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ನೇರವಾಗಿ ಗ್ರಾಹಕರೊಂದಿಗೆ ವ್ಯವಹರಿಸುತ್ತಿದೆ.
ಮಾಹಿತಿಗೆ ಮಂಗಳೂರಿನ ಕೊಟ್ಟಾರದ ಕುಡ್ಲಗ್ ರೈಟ್ ಬಿಲ್ಡಿಂಗ್ ‘ವಿ ಗ್ರೂಪ್’ ಅಸೋಸಿಯೇಟ್ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.