ಬಿ.ಸಿ.ರೋಡ್: ಅಕ್ರಮ ಜುಗಾರಿ ಆಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ನೇತ್ರತ್ವದ ತಂಡ ಆಟದಲ್ಲಿ ನಿರತರಾಗಿದ್ದ 10 ಮಂದಿ ಆರೋಪಿಗಳನ್ನು ಬಂಧಿಸಿ, ಸಾವಿರಾರು ರೂ.ನಗದು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.
ಬಂಟ್ವಾಳ ತಾಲೂಕು ಕೊಡ್ಮಣು ಗ್ರಾಮದ ಕೆನರಾ ಪಾಯಿಂಟ್ ಕೆಂಪು ಕಲ್ಲು ಕೋರೆಯ ಬಯಲು ಜಾಗದಲ್ಲಿ ಹಣವನ್ನು ಪಣವಾಗಿಟ್ಟು ಉಲಾಯಿ- ಪಿದಾಯಿ ಜುಗಾರಿ ಆಡುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಇಬ್ಬರು ಪರಾರಿಯಾಗಿದ್ದು,ಉಳಿದಂತೆ ಆರೋಪಿಗಳಾದ ಲ್ಯಾನ್ಸಿ ರೋಡ್ರಿಗಸ್, ಸಂಶುದ್ದೀನ್, ಜಾಫರ್ ಸಾಧಿಕ್ , ಪ್ರವೀಣ್, ಅರವಿಂದ, ಉಮಾಶಂಕರ, ಪ್ರವೀಣ,ಶೋಧನ್ ,ವಿಜಯ ಕುಮಾರ್, ಮಹಮದ್ ಕಬೀರ ರವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ. ಅವರ ಬಳಿ ಇದ್ದ ನಗದು ರೂ 20500 ಹಾಗೂ ರೂ 1180 ಮೌಲ್ಯದ ಜುಗಾರಿ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.