ಬಂಡೆಗೆ ಬಡಿದು ಮುಳುಗಿ 50 ಲ.ರೂ. ನಷ್ಟ
ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ಹೋಗಿದ್ದ ದೋಣಿಯೊಂದು ಕಾರವಾರ ಸಮೀಪ ಅವಘಡಕ್ಕೀಡಾಗಿ ಮುಳುಗಿದೆ. ದೋಣಿಯಲ್ಲಿದ್ದ ಆರು ಮೀನುಗಾರರನ್ನು ಬೇರೆ ಬೋಟಿನವರು ರಕ್ಷಿಸಿ ದಡಕ್ಕೆ ಸುರಕ್ಷಿತವಾಗಿ ಕರೆತಂದಿದ್ದಾರೆ.
ಭಟ್ಕಳದ ಬಂದರು ಬಳಿ ಬೋಟ್ ಕಲ್ಲಿಗೆ ತಾಗಿ ಮುಳುಗಡೆಯಾಗಿದೆ ಎನ್ನಲಾಗಿದೆ. ಉಡುಪಿ ಸಮೀಪದ ಬ್ರಹ್ಮಾವರದ ಸುರೇಶ್ ಎಂಬವರಿಗೆ ಸೇರಿದ ಬೋಟ್ ಇದಾಗಿದ್ದು, ಕುಮಟಾ ಭಾಗದಲ್ಲಿ ಮೀನುಗಾರಿಕೆ ನಡೆಸಿ ಭಟ್ಕಳ ಬಂದರಿಗೆ ಬರುವಾಗ ಅವಘಡ ಸಂಭವಿಸಿದೆ. ಮೀನು ಇಳಿಸಲು ಬರುತ್ತಿದ್ದಾಗ ಭಟ್ಕಳ ಬಂದರು ಭಾಗದ ಸಮುದ್ರದಲ್ಲಿ ಬೋಟಿನ ತಳಭಾಗ ಕಲ್ಲುಬಂಡೆದೆ ಬಡಿದಿದೆ.
ತಳಭಾಗದಲ್ಲಿ ಬೋಟ್ ಸೀಳುಬಿಟ್ಟ ಪರಿಣಾಮ ನೀರು ಒಳನುಗ್ಗಿ ಮುಳುಗಿದೆ. ಬೋಟಿನಲ್ಲಿ ಮೀನುಗಳು ಹಾಗೂ ಹಲವು ಸಾಮಾನುಗಳಿದ್ದು ಎಲ್ಲವೂ ನೀರುಪಾಲಾಗಿದ್ದು 50 ಲಕ್ಷ ರೂ. ಹೆಚ್ಚು ನಷ್ಟವಾಗಿದೆ.