ಕಾಣಿಯೂರು: ಗ್ರಾಮದ ಚಾರ್ವಾಕ ದೈಪಿಲ ಸೇವಾ ಪ್ರತಿಷ್ಠಾನದ ವತಿಯಿಂದ ಶ್ರೀ ಶಿರಾಡಿ ರಾಜನ್ ದೈವ ಮತ್ತು ಚಕ್ರವರ್ತಿ ಕೊಡಮಣಿತ್ತಾಯ ದೈವಗಳ ನೇಮೋತ್ಸವ ಫೆ.7 ಶುಕ್ರವಾರ ಹಾಗೂ ಫೆ.8 ಶನಿವಾರದಂದು ದೈಪಿಲದಲ್ಲಿ ನಡೆಯಿತು.

ಫೆ.7 ಶುಕ್ರವಾರ ಬೆಳಿಗ್ಗೆ 8 ಕ್ಕೆ ದೈಪಿಲ ಸ್ಥಾನದಲ್ಲಿ ಸ್ಥಳ ಶುದ್ಧಿ ಹಾಗೂ ಗಣಹೋಮ ನಡೆದು ಸಂಜೆ 6 ಕ್ಕೆ ಭಂಡಾರ ತೆಗೆಯಲಾಯಿತು. ಫೆ.8 ಶನಿವಾರ ಬೆಳಿಗ್ಗೆ 10 ಕ್ಕೆ ಸೇವೆ ಹಾಗೂ ಹರಿಕೆಗಳನ್ನು ಒಪ್ಪಿಸುವವರು ದೈವದ ಸನ್ನಿಧಿಗೆ ಬಂದು ಒಪ್ಪಿಸಿದರು. ಮಧ್ಯಾಹ್ನ 12 ಕ್ಕೆ ಗಡಿಗೆ ಹೊರಡುವುದು, ಬಳಿಕ ಅನ್ನಸಂತರ್ಪಣೆ ಜರಗಿತು.
ಈ ಸಂದರ್ಭದಲ್ಲಿ ಅರುವಗುತ್ತು, ನಾಲಕ್ಕು ಮನೆಯವರು, 14 ವರ್ಗ, ಕೊಪ್ಪ-ಮುಪ್ಪೊಕ್ಕಿಲು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.