ಪುತ್ತೂರು: ದರ್ಬೆಯಲ್ಲಿರುವ ರಿಲಾಯನ್ಸ್ ಡಿಜಿಟಲ್ ಎದುರು ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ‘ಅವೆನ್ಯೂ ಕಂಪ್ಯೂಟರ್ಸ್’ ನವೀಕರಣಗೊಂಡು ಶುಕ್ರವಾರ ಶುಭಾರಂಭಗೊಂಡಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸಂಪ್ಯ ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಸಂಸ್ಥೆಯ ಮಾಲಕರಾದ ಅನಿಲ್ ಕುಮಾರ್ ಒತ್ತೆಮುಂಡೂರು, ಮತ್ತಿತರರು ಉಪಸ್ಥಿತರಿದ್ದರು.
ಸಂತೃಪ್ತಿ ಹೋಟೇಲ್ ಬಳಿ ಆಧುನಿಕ ವ್ಯವಸ್ತೆಗಳನ್ನು ಹೊಂದಿರುವ ಅವೆನ್ಯೂ ಕಂಪ್ಯೂಟರ್ಸ್ ವಿವಿಧ ಕಂಪನಿಗಳ ಅಧೀಕೃತ ಡೀಲರ್ ಆಗಿದ್ದು, ಕಂಪ್ಯೂಟರ್ , ಲ್ಯಾಪ್ ಟ್ಯಾಪ್, ಪ್ರಿಂಟರ್ ಮತ್ತು ಬಿಡಿಭಾಗಗಳನ್ನು ಸ್ಪರ್ದಾತ್ಮಕ ದರದಲ್ಲಿ ಪೂರೈಸಲು ಬಧ್ಧವಾಗಿದೆ, ನಿಮ್ಮ ಕಂಪ್ಯೂಟರ್ ಎಲ್ಲಿ ಖರೀದಿಸಿದರೂ ಸರ್ವೀಸ್ ನ ಸಂದರ್ಭದಲ್ಲಿ ನಮ್ಮ ಸಂಸ್ಥೆಗೆ ಭೇಟಿ ನೀಡಿದಲ್ಲಿ, ನಮ್ಮ ನುರಿತ ಟೆಕ್ನೀಶಿಯನ್ ಗಳು ಕ್ಲಪ್ತ ಸಮಯದಲ್ಲಿ ನಿಮಗೆ ಸೇವೆಯನ್ನು ನೀಡಲು ಬಧ್ಧರಾಗಿದ್ದಾರೆ.ಸಿ.ಸಿ ಕ್ಯಾಮರ ಮಾರಾಟ ಮತ್ತು ಸೇವೆಯಲ್ಲಿಯೂ ನಾವು ತೊಡಗಿಸಿಕೊಂಡು ವಿವಿಧ ಸರಕಾರಿ, ಸಹಕಾರಿ ಸಂಸ್ಥೆಗಳಿಗೆ ಸೇವೆಯನ್ನು ನೀಡುತ್ತಿದ್ದು ಕ್ಯಾಂಪ್ಕೋ , ಅಕ್ಷಯ ಕಾಲೇಜು, ಪ್ರೇರಣಾ, ನ್ಯೂಸ್ ಪುತ್ತೂರು ನಂತಹ ಪ್ರತಿಷ್ಟಿತ ಸಂಸ್ಥೆಗಳು ಸಂತೃಪ್ತ ಗ್ರಾಹಕರಾಗಿರುವುದು ನಮ್ಮ ವಿಶ್ವಾಸರ್ಹ ಸೇವೆಗೆ ಸಾಕ್ಷಿಯಾಗಿದೆ.