ವಿಟ್ಲ : ದ. ಕ. ಗ್ಯಾರೇಜ್ ಮಾಲಕರ ಸಂಘ ಮಂಗಳೂರು, ವಿಟ್ಲ ವಲಯಕ್ಕೆ ಜಿಲ್ಲಾಧ್ಯಕ್ಷರ ಅಧಿಕೃತ ಬೇಟಿ ಕಾರ್ಯಕ್ರಮ ಚಂದಳಿಕೆ ಭಾರತ್ ಆಡಿಟೋರಿಯಂ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ದಿನಕರ ಕುಲಾಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ಜೀವ ವಿಮೆಯ ಮಾಹಿತಿಯನ್ನು ಪುತ್ತೂರು ಅಂಚೆ ಕಚೇರಿಯ ಮಾರ್ಕೆಟಿಂಗ್ ಮ್ಯಾನೇಜರ್ ಗುರುಪ್ರಸಾದ್ ನೀಡಿದರು. ಬಳಿಕ ವಿಟ್ಲ ವಲಯದ ಸದಸ್ಯರ ವಿಮಾ ನೊಂದಾವಣೆ ಮಾಡಲಾಯಿತು. ವಿಟ್ಲ ವಲಯದ ಅಧ್ಯಕ್ಷ ಲೀಯೋ ಡಿ ಲಸ್ರಾದೊ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ. ಕ. ಜಿಲ್ಲಾ ಗ್ಯಾರೇಜ್ ಮಾಲಕರ ಸೌಹಾರ್ದ ಸಹಕಾರಿ ಸಂಘ ಮಂಗಳೂರು ಇದರ ಅಧ್ಯಕ್ಷ ಜನಾರ್ದನ ಅತ್ತಾವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್, ಕೋಶಾಧಿಕಾರಿ ಕಿರಣ್ ರಾಜ್, ಯಕ್ಷ ಭಾರತ ಪ್ರತಿಷ್ಠಾನದ ಅಧ್ಯಕ್ಷ ಸಂಜೀವ ಪೂಜಾರಿ, ದ. ಕ. ಜಿಲ್ಲಾ ದಲಿತ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ. ಕೆ. ಶೇಸಪ್ಪ ಬೆದ್ರಕಾಡು ಮತ್ತು ವಿಟ್ಲ ವಲಯದ ಗೌರವಾಧ್ಯಕ್ಷ ಬಿ. ಕೆ. ಬಾಬು ಭಾಗವಹಿಸಿದ್ದರು.
ಪವನ್ ಪಿ ಆಶಯ ಗೀತೆ ಹಾಡಿದರು. ಲೆಕ್ಕ ಪರಿಶೋಧಕ ಪಡಾರು ಚಂದ್ರಶೇಖರ ಭಟ್ ಪ್ರಾಸ್ತವಿಕವಾಗಿ ಮಾತನಾಡಿದರು. ವಿಟ್ಲ ವಲಯದ ಗೌರವ ಸಲಹೆಗಾರ ಸುಂದರ ಆಚಾರ್ಯ ನೆಗಳಗುಳಿ ಸ್ವಾಗತಿಸಿ, ರಾಜಶೇಖರ ವಂದಿಸಿದರು. ವಿಟ್ಠಲ ಜೇಸೀಸ್ ಶಾಲಾ ಆಡಳಿತ ಅಧಿಕಾರಿ ರಾಧಾಕೃಷ್ಣ ಎರುಂಬು ಕಾರ್ಯಕ್ರಮವನ್ನು ನಿರೂಪಿಸಿದರು.