ಹೈಸ್ಕೂಲ್‌ ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಂದಲೇ ಅತ್ಯಾಚಾರ

ಚೆನ್ನೈ : ಹೈಸ್ಕೂಲ್‌ ವಿದ್ಯಾರ್ಥಿನಿಯ ಮೇಲೆ ಆಕೆಯ ಶಾಲೆಯ ಮೂವರು ಶಿಕ್ಷಕರೇ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ಈ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ಶಿಕ್ಷಕರನ್ನು ಬಂಧಿಸಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಬಾಲಕಿಯ ತಾಯಿಯ ದೂರಿನ ಆಧಾರದ ಮೇಲೆ ಶಿಕ್ಷಕರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆ ಬಾಲಕಿ ಒಂದು ತಿಂಗಳಿಗೂ ಹೆಚ್ಚು ಕಾಲ ಶಾಲೆಗೆ ಹೋಗಿರಲಿಲ್ಲ. ಶಾಲೆಯ ಮುಖ್ಯ ಶಿಕ್ಷಕರು ವಿಚಾರಿಸಿದಾಗ ಮಗಳ ಮೇಲೆ ಶಾಲೆಯಲ್ಲಿ ಹಲ್ಲೆಯಾಗಿರುವುದಾಗಿ ತಾಯಿ ಬಹಿರಂಗಪಡಿಸಿದರು. ನಂತರ ಬಾಲಕಿಯನ್ನು ಕೂಲಂಕಷವಾಗಿ ವಿಚಾರಿಸಿದಾಗ ಮೂವರು ಶಿಕ್ಷಕರು ಅತ್ಯಾಚಾರ ಎಸಗಿದ ವಿಷಯ ತಿಳಿಸಿದ್ದಾಳೆ.

ಮುಖ್ಯೋಪಾಧ್ಯಾಯರು ತಕ್ಷಣವೇ ಪೊಲೀಸ್ ದೂರು ದಾಖಲಿಸಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗೆ ವರದಿ ಮಾಡುವಂತೆ ಸೂಚಿಸಿದರು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೃಷ್ಣಗಿರಿಯ ಮಹಿಳಾ ಪೊಲೀಸ್ ತಂಡ ಮೂವರು ಆರೋಪಿ ಶಿಕ್ಷಕರನ್ನು ಬಂಧಿಸಿದ್ದು, ಅವರು ಈಗ 15 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅರ್ಮುಗಂ, ಪ್ರಕಾಶ್ ಮತ್ತು ಚಿನ್ನಸ್ವಾಮಿ ಬಂಧಿತ ಶಿಕ್ಷಕರು. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಗಳು ಬಂದ ನಂತರ ಈ ಮೂವರು ಶಿಕ್ಷಕರನ್ನು ನೌಕರಿಯಿಂದ ವಜಾಗೊಳಿಸಲಾಗಿದೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top