ಕಾಸರಗೋಡು ತಾಲೂಕು ಬೆಳ್ಳಿಪ್ಪಾಡಿ ಗುತ್ತು ತರವಾಡು ಮನೆಯಲ್ಲಿ ಧರ್ಮದೈವ ಹಾಗೂ ಸಪರಿವಾರ ದೈವಗಳ ವರ್ಷಾವಾದಿ ನೇಮೋತ್ಸವವು ಫೆ. ೬ರಿಂದ ಫೆ. ೭ರತನಕ ನಡೆಯಲಿದೆ.
ಫೆ.೬ರಂದು ಬೆಳಿಗ್ಗೆ ಗಂಟೆ ೮ರಿಂದ ಪುಣ್ಯಾಹವಾಚನ, ಗಣಪತಿ ಹೋಮ, ಶ್ರೀ ಸತ್ಯನಾರಾಯಣ ಪೂಜೆ, ತಿರುಪತಿ ವೆಂಕಟ್ರಮಣ ದೇವರ ಮುಡಿಪು ಪೂಜೆ ನಣತರ ದೈವಗಳಿಗೆ ತಂಬಿಲ ಸೇವೆ ನಡೆದು ಮದ್ಯಾಹ್ನ ಅನ್ನಸಂತರ್ಪಣೆ ನೆರವೇರಲಿದೆ,
ರಾತ್ರಿ ೭ ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ನಂತರ ಮೈಸಂದಾಯ ದೈವದ ನೇಮೋತ್ಸವ ನಡೆಯದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮರುದಿವಸ ಅಂದರೆ ಫೆ. ೭ರಂದು ೮ಗಂಟೆಗೆ ಸರಿಯಾಗಿ ಕಾಂಚನಾದಿ ಧೂಮಾವತಿ ಮತ್ತು ಭಾವನ ದೈವದ ನೇಮೋತ್ಸವ ನಡೆದು ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೈವಗಳ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ಕೃಪೆಗೆ ಪಾತ್ರರಾಗುವಂತೆ ಬೆಳ್ಳಿಪ್ಪಾಡಿ ಶ್ರೀಮತಿ ಲೀಲಾವತಿ ರೈ ಹಾಗೂ ಕುಟುಂಬಸ್ತರು ವಿನಂತಿಸಿದ್ದಾರೆ.