ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಮನೆಗಳ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಕೆಲವರ ವಿರೋಧದ ನಡುವೆಯೂ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ನಡುವೆ ರಾತ್ರೋರಾತ್ರಿ ಶ್ವಾನ ಪ್ರೇಮಿಯೊಬ್ಬರ ಮನೆಯನ್ನು ಆಡಳಿತ ಮಂಡಳಿ ಕಡೆವಿ ಹಾಕಿದ್ದು, ಮನೆಯೊಳಗಿದ್ದ ನಾಲ್ಕು ನಾಯಿ ಮರಿಗಳು ಸಾವನಪ್ಪಿದೆ ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಆಡಳಿತ ಮಂಡಳಿ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
60 ಕೋ.ರೂ.ವೆಚ್ಚದ ಮಾಸ್ಟರ್ ಪ್ಲಾನ್‌ಗೆ ಪೂರಕವಾಗಿ ಶ್ರೀ ಮಹಾಲಿಂಗೇಶ್ವರ ದೇಗುಲದ ವಠಾರದ ಮನೆಗಳ ತೆರವು ಕಾರ್ಯಾಚರಣೆ ಮುಂದುವರಿದಿದೆ. ಈಗಾಗಲೇ ಬಹುತೇಕ ಮನೆಗಳನ್ನು ತೆರವುಗೊಳಿಸಲಾಗಿದೆ. ಈ ನಡುವೆ ರಾತ್ರೋರಾತ್ರಿ ಶ್ವಾನ ಪ್ರೇಮಿಯೊಬ್ಬರ ಮನೆಯನ್ನು ಕೆಡವಲಾಗಿದೆ.
ರಾಜೇಶ್ ಬನ್ನೂರು ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಇವರ ಮನೆಯ ಆವರಣದಲ್ಲಿದ್ದ ನಾಯಿ ಮರಿಗಳನ್ನೂ ಸಂರಕ್ಷಿಸದೆ ಮನೆ ಕೆಡವಲಾಗಿದೆ. ಈ ವೇಳೆ ಮನೆಯೊಳಗೆ ಸಿಲುಕಿ ನಾಲ್ಕು ನಾಯಿ ಮರಿಗಳು ಸಾವನಪ್ಪಿದೆ ಎಂದು ಹೇಳಲಾಗಿದೆ. ಯಾವುದೇ ನೋಟೀಸ್ ನೀಡದೆ ಏಕಾಏಕಿ ತೆರವು ಕಾರ್ಯಾಚರಣೆ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.