ಪುತ್ತೂರು: ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಕಳೆದ ಹಲವಾರು ವರ್ಷಗಳಿಂದ ವಾಸವಾಗಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿದ್ದ ಮನೆಯನ್ನು ರಾತ್ರೋ ರಾತ್ರಿ ಕೆಡವಿದ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದು, ಇದೊಂದು ದರೋಡೆ ಕೃತ್ಯ. ಈ ಹಿನ್ನಲೆಯಲ್ಲಿ ಅಪರಾಧಿಗಳನ್ನು ಪತ್ತೆಹಚ್ಚಿ ದರೋಡೆ ಪ್ರಕರಣ ದಾಖಲಿಸಬೇಕು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಪೊಲೀಸ್ ಇಲಾಖೆಗೆ ಆಗ್ರಹಿಸಿದರು.
ಮಂಗಳವಾರ ರಾತ್ರೋ ರಾತ್ರಿ ಅಂದರೆ ಸುಮಾರು ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ದೇವಸ್ಥಾನದ ವಠಾರದಲ್ಲಿ ರಾಜೇಶ್ ಬನ್ನೂರು ಅವರ ಮನೆಯನ್ನು ಮುಸುಕುಧಾರಿಗಳು ಜೆಸಿಬಿ ಸಹಿತ ಬಂದು ಕೆವಿದ್ದರು. ಘಟನೆ ತಿಳಿಯುತ್ತಿದ್ದಂತೆ ಬುಧವಾರ ಬೆಳಿಗ್ಗೆ ಬಿಜೆಪಿ ಮುಖಂಡರು ಪೊಲೀಸ್ ಠಾಣೆ ಎದುರು ಘಟನೆಯನ್ನು ಖಂಡಿಸಿದ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರತಿಕ್ರಿಯೆ ನೀಡಿ, ಈ ಘಟನೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅನ್ಯಾಯ ಮಾಡಿದ ಹಾಗಿದೆ. ಮಠ, ಮಂದಿ, ದೇವಸ್ಥಾನ, ಮದ್ರಸಗಳಿಗೆ ಕೆಲವೊಂದು ನಿಯಮಗಳಿದ್ದು, ಅಭಿವೃದ್ಧಿ ಸಂದರ್ಭದಲ್ಲಿ ಜಾಗ ಬೇಕಾದಾಗ ಆ ಜಾಗದಲ್ಲಿ ವಾಸವಿದ್ದವರಿಗೆ ಬಿಟ್ಟುಕೊಡಲು ಮೊದಲೇ ನೋಟೀಸ್ ನೀಡಬೇಕು, ಇಲ್ಲವೇ ಪರ್ಯಾಯ ವ್ಯವಸ್ಥೆ ಮಾಡಬೇಕು, ಸಂವಿಂಧಾನವಾಗಿ ಹಕ್ಕುಗಳನ್ನು ನ್ಯಾಯಾಲಯಕ್ಕೆ ಕೇಳುವ ಅವಕಾಶ ನೀಡಬೇಕು.
ಏಕಾಏಕಿ ಧ್ವಂಸ ಮಾಡುವುದು ಕಾನೂನಿನ ನೇರ ವಿರೋಧಿ ಕೆಲಗಳು ಇದಾಗಿದ್ದು, ಯಾವುದೇ ನೋಟೀಸ್ ನೀಡಿಲ್ಲ, ಮನೆಯಲ್ಲಿರುವ ಸಾಮಾಗ್ರಿಗಳನ್ನು ತೆಗೆಯಲು ಸಮಯಾವಕಾಶ ನೀಡಿಲ್ಲ. ಇದು ನ್ಯಾಯಾಲಯ ಮತ್ತು ಸಂವಿಧಾನ ಮೀರಿ ಆಡಳಿತ ಮಂಡಳಿ ತೆಗೆದುಕೊಂಡಿರುವ ನಿರ್ಧಾರ ತಪ್ಪು. ಇದೊಂದು ರೀತಿಯ ದರೋಡೆ, ಬೀದಿಗೆ ಬಿಸಾಡಿ ಅಭಿವೃದ್ಧಿ ಕೆಲಸ, ಿವರಿಗೆ ಬಡವರ ಬಗ್ಗೆ ಕನಿಕರವೇ ಇಲ್ಲ. ತಕ್ಷಣ ಆಡಳಿತ ಮಂಡಳಿಯನ್ನು ಕಿತ್ತು ಬಿಸಾಕಬೇಕು. ಇದರ ಹಿಂದೆ ಯಾರೆಲ್ಲಾ ಇದ್ದಾರೆ ಈ ಕುರಿತು ತನಿಖೆ ಮಾಡಬೇಕು ಎಂದು ಆಗ್ರಹಿಸಿದ ಅವರು, ನ್ಯಾಯಾಲಯದಿಂದ ಆದೇಶ ತಂದು ಮನೆ ಒಡಿರಿ. ಅದನ್ನು ಬಿಟ್ಟು ದರೋಡೆ ರೀತಿಯಲ್ಲಿ ತೆರವು ಕಾರ್ಯ ಸರಿಯಲ್ಲ. ಮುಂದಿನ ಒಂದು ವಾರದೊಳಗೆ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಕೆಲಸ ನಾವು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.