ನ್ಯೂಸ್‍ ಪುತ್ತೂರು ಸಂಪಾದಕರಾಗಿ ಜ್ಯೋತಿ ಪ್ರಕಾಶ್‍ ಪುಣಚ

ಪುತ್ತೂರು : ಪುತ್ತೂರು ಕೇಂದ್ರವಾಗಿರಿಸಿ ಕಳೆದ ಕೆಲವು ವರ್ಷಗಳಿಂದ ಜನಪರ ಸೇವಾಧಾರಿತ ಕಾರ್ಯ ಚಟುವಟಿಗಳನ್ನು ನೀಡುತ್ತಾ ಜನರ ಪ್ರೀತಿ ವಿಶ್ವಾಸಗಳಿಗೆ ಪಾತ್ರವಾಗಿರುವ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ವ್ಯಾಪ್ತಿಯಲ್ಲಿ ಜನಮನದ ಪ್ರತಿಧ್ವನಿಯಾಗಿ ಕಾರ್ಯಾಚರಿಸುತ್ತಿರುವ ಸಮಗ್ರ ನೈಜ ಸುದ್ದಿಗಳ ಪ್ರಸರಣದ “ನ್ಯೂಸ್ ಪುತ್ತೂರು” ವಾಹಿನಿಯ ಸಂಪಾದಕರಾಗಿ ಹಿರಿಯ ಅನುಭವಿ ಪತ್ರಕರ್ತ, ಸಾಹಿತಿ ಹಾಗೂ ಲೇಖಕರಾಗಿರುವ  ಜ್ಯೋತಿಪ್ರಕಾಶ್ ಪುಣಚ ಅವರನ್ನು ಸಂಸ್ಥೆ ನೇಮಕ ಮಾಡಿದೆ.

ಕರಾವಳಿ ಮಾಧ್ಯಮ ಲೋಕದಲ್ಲಿ ಎರಡನೇಯ ವರ್ಷಕ್ಕೆ ಕಾಲಿಡುತ್ತಿರುವ ನ್ಯೂಸ್ ಪುತ್ತೂರು ಪುತ್ತೂರಿನ ಏಳ್ಮುಡಿಯಲ್ಲಿ ಸುಸಜ್ಜಿತ ಸ್ಟುಡಿಯೋ, ವ್ಯವಸ್ಥಿತ ನ್ಯೂಸ್ ಡೆಸ್ಕ್ ಗಳನ್ನು ಹೊಂದಿದ್ದು, ಜನಮನದ ಪ್ರತಿಧ್ವನಿ ಎಂಬ ಧ್ಯೇಯ ವಾಕ್ಯದಂತೆ ವಸ್ತುನಿಷ್ಠ ವರದಿಗಳನ್ನು ಯುಟ್ಯೂಬ್ ಮತ್ತು ವೆಬ್ ತಾಣಗಳಲ್ಲಿ ಬಿತ್ತರಿಸುತ್ತಿದೆ, ದಿನಂಪ್ರತಿ ಇ – ಪೇಪರ್  ಮತ್ತು ಎರಡು ಬಾರಿ ನ್ಯೂಸ್ ಬುಲೇಟಿನ್ ಪ್ರಸಾರ ಮಾಡುತ್ತಿದೆ.

ಪುತ್ತೂರು ಕೇಂದ್ರವಾಗಿರಿಸಿ ಸ್ಥಳೀಯ ವಿಚಾರಗಳಿಗೆ ಆಧ್ಯತೆಯನ್ನು ನೀಡುತ್ತಾ ವಿಶ್ವಾದ್ಯಾಂತದ  ನೈಜಸುದ್ದಿಗಳನ್ನು ಜನಮನದ ಪ್ರತಿಧ್ವನಿಯಾಗಿ ಓದುಗರಿಗೆ ನೀಡುತ್ತಾ ಬಂದಿರುವ ನ್ಯೂಸ್ ಪುತ್ತೂರು ಜಿಲ್ಲೆಯಾದ್ಯಂತ ನಡೆಯುವ ದೈವ-ದೇವಸ್ಥಾನಗಳ ವಿಶೇಷ ಕಾರ್ಯಕ್ರಮಗಳು,  ವಾರ್ಷಿಕ ಜಾತ್ರೆ ರಥೋತ್ಸವಗಳು, ಸಂಘ¸ ಸಂಸ್ಥೆಗಳ ಕಾರ್ಯಕ್ರಮಗಳು, ಕಂಬಳ, ಆಯನ, ನೇಮೋತ್ಸವಗಳು , ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡೋತ್ಸವಗಳು ಹೀಗೆ ಎಲ್ಲಾ ಬಗೆಯ ಕಾರ್ಯಕ್ರಮಗಳಿಗೆ ಆಧ್ಯತೆ ನೀಡಿ ಅವುಗಳನ್ನು ನೇರ ಪ್ರಸಾರದ ಮೂಲಕ ವಿಶ್ವದರ್ಜೆಯ ಗುಣಮಟ್ಟದಲ್ಲಿ ವೀಕ್ಷಕರಿಗೆ ತಲುಪಿಸುತ್ತಿದೆ. ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಸಮಗ್ರ ಮಾಹಿತಿಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ವಿಶೇಷ ಸಂಚಿಕೆಗಳನ್ನು ಹೊರತರುತ್ತಿದ್ದು, ಈಗಾಗಲೇ ಪುತ್ತೂರು ಮಹಾಲಿಂಗೇಶ್ವರ ದೇಗುಲದ ಸಮಗ್ರ ಚಿತ್ರಣಗಳನ್ನು ದಾಖಲಿಸಿದ “ಶಿವಾಮೃತ” ಎಂಬ ಹೊತ್ತಗೆ ಓದುಗರ ಕೈ ಸೇರಿ ಜನಮನ ಗೆದ್ದಿದ್ದು, ತಾಲೂಕಿನ ದೇವಸ್ಥಾಗಳ ಹಾಗೂ ಗ್ರಾಮ ದೈವಸ್ಥಾನಗಳ ಸಮಗ್ರ ಮಾಹಿತಿಯನ್ನೊಳಗೊಂಡ “ದಿವ್ಯದರ್ಶನ’ ಎಂಬ ಸಂಚಿಕೆ ಕೆಲವೇ ಸಮಯಗಳಲ್ಲಿ ಓದುಗರ ಕೈ ಸೇರಲಿದೆ.

































 
 

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ 28 ವರ್ಷಗಳ ಅನುಭವ ಇರುವ ಹಿರಿಯ ಪ್ರತಿಭಾವಂತ ಪತ್ರಕರ್ತ ಜ್ಯೋತಿಪ್ರಕಾಶ್ ಪುಣಚ ಅವರು ಬಿ.ಯಸ್ಸಿ ಪದವಿದರರಾಗಿದ್ದು,ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಬಹಳಷ್ಟು ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಸಮಾಜದಲ್ಲಿರುವ ಭ್ರಷ್ಟ ವ್ಯವಸ್ಥೆಗಳ ವಿರುದ್ಧ  ತಮ್ಮದೇ ಸಂಘ ಸಂಸ್ಥೆಗಳ ಮೂಲಕ ಶೋಷಿತರಿಗೆ, ಸಹೋದ್ಯೋಗಿಗಳಿಗೆ ನ್ಯಾಯ ಒದಗಿಸಿ ಕೊಡುತ್ತಾ ಬಂದಿರುವ ಅವರು ಪತ್ರಿಕೋದ್ಯಮದ ವಿವಿಧ ರಂಗಗಳಲ್ಲಿ ಪರಿಣಿತಿಯನ್ನು ಪಡೆದವರಾಗಿದ್ದಾರೆ. ಬಿಡಿವರದಿಗಾರರಾಗಿ, ವರದಿಗಾರರಾಗಿ, ಡೆಸ್ಕ್ ರಿಪೋರ್ಟರಾಗಿ, ತನಿಖಾ ವರದಿಗಾರರಾಗಿ, ಕ್ರೈಮ್ ವರದಿಗಾರರಾಗಿ, ಕಛೇರಿ ನಿರ್ವಾಹಕರಾಗಿ, ಲೇಖಕರಾಗಿ, ವ್ಯವಸ್ಥಾಪಕರಾಗಿ, ಕಾರ್ಯನಿರ್ವಾಹಕ ಸಂಪಾದಕರಾಗಿ, ಚ್ಯಾನೆಲ್ ವರದಿಗಾರರಾಗಿ, ಕಾರ್ಯನಿರ್ವಹಿಸಿದ ಇವರು ಕರ್ನಾಟಕ ರಾಜ್ಯ ಜರ್ನಲಿಸ್ಟ್ ಯೂನಿಯನ್  ಇದರ  ಜಿಲ್ಲಾ ಉಪಾಧ್ಯಕ್ಷರಾಗಿದ್ದಾರೆ. ಅವರ ಬಹುಮುಖ ಪ್ರತಿಭೆ, ಪತ್ರಿಕಾ ರಂಗದಲ್ಲಿ ಅವರ ಅನುಭವ ಹಾಗೂ ಸಾಧನೆಯನ್ನು ಗುರುತಿಸಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥೆಯಾಗಿರುವ ನ್ಯೂಸ್ ಪುತ್ತೂರು ವಾಹಿನಿಯಲ್ಲಿ ಸಂಪಾದಕರಾಗಿ ಉನ್ನತ ಸ್ಥಾನವನ್ನು ನೀಡಿದ್ದು, ಮುಂದೆ  ಅವರ  ಮುಂದಾಳುತ್ವದಲ್ಲಿ ನ್ಯೂಸ್ ಪುತ್ತೂರು ಕಾರ್ಯಾಚರಿಸಲಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top